ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ : ಐತಿಹಾಸಿಕವಾಗಲಿರುವ ಜಿ-20 ಶೃಂಗಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ : ಐತಿಹಾಸಿಕವಾಗಲಿರುವ ಜಿ-20 ಶೃಂಗಸಭೆ
ಬೃಹತ್ ಆರ್ಥಿಕತೆಯನ್ನು ಹೊಂದಿರುವ ಜಗತ್ತಿನ 20 ರಾಷ್ಟ್ರಗಳ ನಾಯಕರು ಶನಿವಾರದಂದು ನಡೆಯುವ ಐತಿಹಾಸಿಕ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸುಮಾರು ಎರಡು ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ ಜಿ-20 ರಾಷ್ಟ್ರಗಳ ನಾಯಕರ ತುರ್ತು ಸಭೆಯನ್ನು ಕರೆದಿದ್ದು ಚರ್ಚೆ ನಡೆಸಿದ್ದರು. ಆರ್ಥಿಕ ಕುಸಿತವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ವ್ಯವಹಾರಗಳ ಮೂಲಗಳು ತಿಳಿಸಿವೆ.

ಅಮೆರಿಕ ಸೇರಿದಂತೆ ಬಹುತೇಕ ಪ್ರಬಲ ರಾಷ್ಟ್ರಗಳ ಆರ್ಥಿಕ ಸ್ಥಿತಿ ಕುಸಿತಗೊಂಡಿದ್ದು, ಶೇರುಪೇಟೆಗಳ ಶೇರುಸೂಚ್ಯಂಕಗಳು ಇಳಿಮುಖದತ್ತ ಸಾಗಿರುವುದರಿಂದ ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸರಿಪಡಿಸಿ ಹಣಕಾಸು ಸಂಸ್ಥೆಗಳನ್ನು ಬಲಪಡಿಸುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಿಂದ ಹರಡಿದ ಆರ್ಥಿಕ ಕುಸಿತ ನಿಧಾನವಾಗಿ ಜಗತ್ತಿನಾದ್ಯಂತ ಪಸರಿಸಿದ್ದು, ಮುಂಬರುವ ವರ್ಷದಲ್ಲಿ ಜಾಗತಿಕ ಆರ್ಥಿಕ ಅಭಿವೃದ್ಧಿ ಶೇ.2.2ರಷ್ಟು ನಿಧಾನವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸಲ್ಲಿಸಿರುವ ಸಮೀಕ್ಷಾ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನವರಿಯಿಂದ ವಿಮಾನ ದರದಲ್ಲಿ ಇಳಿಕೆ -ಪಟೇಲ್
ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ
ಸ್ಥಿರ ಠೇವಣಿಗಳ ಬಡ್ಡಿ ದರ ಕಡಿತ