ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮುಕೇಶ್ ಅಂಬಾನಿಗೆ' ಶ್ರೀಮಂತ ಭಾರತೀಯ' ಗರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಕೇಶ್ ಅಂಬಾನಿಗೆ' ಶ್ರೀಮಂತ ಭಾರತೀಯ' ಗರಿ
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ, 20.8 ಬಿಲಿಯನ್ ಡಾಲರ್‌ ನಿವ್ವಳ ಸಂಪತ್ತಿನ ಅನಿವಾಸಿ ಭಾರತೀಯ ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ಅವರನ್ನು ಹಿಂದಕ್ಕೆ ತಳ್ಳಿ ಜಗತ್ತಿನ ಶ್ರೀಮಂತ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿರುವ ವಾರ್ಷಿಕ ಶ್ರೀಮಂತರ ಪಟ್ಟಿ ಪ್ರಕಾರ, ಮಿತ್ತಲ್ ತಮ್ಮ 20.8 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಮುಕೇಶ್ ಅಂಬಾನಿ ಕಿರಿಯ ಸಹೋದರ ಅನಿಲ್ ಅಂಬಾನಿ 12.5 ಬಿಲಿಯನ್ ಡಾಲರ್‌ ನಿವ್ವಳ ಸಂಪತ್ತಿನೊಂದಿಗೆ ಮೂರನೇಯ ಸ್ಥಾನವನ್ನು ಪಡೆದಿದ್ದಾರೆ.

ಟೆಲಿಕಾಂ ಕ್ಷೇತ್ರದ ದಿಗ್ಗಜ ಸುನಿಲ್ ಮಿತ್ತಲ್ ಮತ್ತು ರಿಯಲ್ಟಿ ವಹಿವಾಟಿನ ಕೆ.ಪಿ.ಸಿಂಗ್, ಕ್ರಮವಾಗಿ 7.9 ಬಿಲಿಯನ್ ಡಾಲರ್ ಹಾಗೂ 7.8 ಬಿಲಿಯನ್ ಡಾಲರ್‌ ನಿವ್ವಳ ಸಂಪತ್ತಿನೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನವನ್ನು ಪಡೆದಿದ್ದಾರೆ.

ಶೇರುಪೇಟೆ ಕುಸಿತ ಹಾಗೂ ರೂಪಾಯಿ ಅಪಮೌಲ್ಯದಿಂದಾಗಿ ಭಾರತೀಯ 40 ಶ್ರೀಮಂತರ ಸಂಪತ್ತಿನಲ್ಲಿ ಶೇ. 60 ರಷ್ಟು ಕುಸಿತವಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ಕೇವಲ ಒಂದು ವರ್ಷದ ಅವಧಿಯಲ್ಲಿ ಭಾರತೀಯ 40 ಶ್ರೀಮಂತರ ಒಟ್ಟು ಸಂಪತ್ತು 351 ಬಿಲಿಯನ್ ಡಾಲರ್‌ಗಳಿಂದ 139 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಫೋರ್ಬ್ಸ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ದಾಖಲಿಸಿದೆ.

ಜಾಗತಿಕ ಆರ್ಥಿಕ ಕುಸಿತ ಭಾರತೀಯ ಉದ್ಯಮಿಗಳ ಪಾಲಿಗೆ ಕಂಟಕಪ್ರಾಯವಾಗಿದ್ದು, ಪ್ರಸಕ್ತ ವರ್ಷದಲ್ಲಿ ಶೇ.48 ರಷ್ಟು ಶೇರುಪೇಟೆ ಕುಸಿತಗೊಂಡಿದೆ. ಡಾಲರ್ ಎದುರಿಗೆ ರೂಪಾಯಿ ಶೇ.24 ರಷ್ಟು ಇಳಿಕೆಯಾಗಿದ್ದು, ಆರ್ಥಿಕ ಅಭಿವೃದ್ಧಿ ಕುಸಿತದಿಂದಾಗಿ ದೇಶದ ಹಣದುಬ್ಬರ ಎರಡಂಕಿಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತ : ಐತಿಹಾಸಿಕವಾಗಲಿರುವ ಜಿ-20 ಶೃಂಗಸಭೆ
ಜನವರಿಯಿಂದ ವಿಮಾನ ದರದಲ್ಲಿ ಇಳಿಕೆ -ಪಟೇಲ್
ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌
ಆರ್ಥಿಕ ಕುಸಿತದಿಂದ ಪ್ರವಾಸೋದ್ಯಮಕ್ಕೆ ಧಕ್ಕೆಯಿಲ್ಲ