ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಂದಂಕಿಗೆ ತಲುಪಿದ ಹಣದುಬ್ಬರ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂದಂಕಿಗೆ ತಲುಪಿದ ಹಣದುಬ್ಬರ ದರ
ಹಣದುಬ್ಬರ ದರ ನವೆಂಬರ್ 1 ಕ್ಕೆ ವಾರಂತ್ಯಗೊಂಡಂತೆ ಶೇ. 10.72 ರಿಂದ ಶೇ. 8.98ಕ್ಕೆ ಇಳಿಕೆ ಕಂಡಿದೆ ಎಂದು ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಇಂದು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಶೇ.10.72 ರಷ್ಟಿದ್ದ ಹಣದುಬ್ಬರ ದರ, ಪ್ರಸಕ್ತ ವಾರದಲ್ಲಿ ಶೇ.1.74ರಷ್ಟು ಇಳಿಕೆಯಾಗಿ ಶೇ.8.98ಕ್ಕೆ ತಲುಪಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಹಣದುಬ್ಬರ ದರ 21 ವಾರಗಳ ಹಿಂದೆ ಶೇ. 9.32 ರಷ್ಟಿದ್ದು, ನಂತರ ನಿಧಾನವಾಗಿ ಏರಿಕೆಯನ್ನು ಕಂಡಿದ್ದು, ಜೂನ್ ತಿಂಗಳ ಮೊದಲ ವಾರದಲ್ಲಿ ಎರಡಂಕಿಯ ಏರಿಕೆಯನ್ನು ಕಂಡಿತ್ತು. ಕಚ್ಚಾ ತೈಲ ಮತ್ತು ಜೆಟ್ ಇಂಧನಗಳ ದರಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಹಣದುಬ್ಬರ ದರ ಇಳಿಕೆ ಕಂಡಿದೆ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಹಾಗೂ ಉಕ್ಕಿನ ದರಗಳಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ದೇಶದ ಹಣದುಬ್ಬರ ದರ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞೆ ಅಂಜಲಿ ವರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಕೇಶ್ ಅಂಬಾನಿಗೆ' ಶ್ರೀಮಂತ ಭಾರತೀಯ' ಗರಿ
ಆರ್ಥಿಕ ಕುಸಿತ : ಐತಿಹಾಸಿಕವಾಗಲಿರುವ ಜಿ-20 ಶೃಂಗಸಭೆ
ಜನವರಿಯಿಂದ ವಿಮಾನ ದರದಲ್ಲಿ ಇಳಿಕೆ -ಪಟೇಲ್
ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ
ತೈಲ: ಪ್ರತಿ ಬ್ಯಾರೆಲ್‌ಗೆ 55 ಡಾಲರ್‌