ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವ್ಯಾಪಾರ ಒಪ್ಪಂದಕ್ಕೆ ಪರಸ್ಪರ ಸಹಕಾರ ಅಗತ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವ್ಯಾಪಾರ ಒಪ್ಪಂದಕ್ಕೆ ಪರಸ್ಪರ ಸಹಕಾರ ಅಗತ್ಯ
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಏಷ್ಯಾ ಖಂಡದ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಆರ್ಥಿಕ ಕುಸಿತವನ್ನು ತಡೆಯಲು ಸಾಧ್ಯ ಎಂದು ಪ್ರಧಾನಿ ಡಾ.ಮನಮೋಹನ್‌ಸಿಂಗ್ ಹೇಳಿದ್ದಾರೆ.

ವಿಶೇಷವಾಗಿ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಕ್ಷೇತ್ರದಲ್ಲಿ, ಏಷ್ಯಾ ರಾಷ್ಟ್ರಗಳು ಮುಕ್ತ ವ್ಯಾಪಾರ ಒಪ್ಪಂದ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಏಕತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಬೇ ಆಫ್ ಬೆಂಗಾಲ್ ಮಲ್ಟಿ ಸೆಕ್ಟರಲ್ ಆಂಡ್ ಎಕಾನಾಮಿಕ್ ಕೋ-ಅಪರೇಶನ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಏಷ್ಯಾ ರಾಷ್ಟ್ರಗಳು ಸರಕು ಸಾಗಾಣಿಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕುವುದರೊಂದಿಗೆ ನಿಗದಿತ ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದು ಪ್ರಧಾನಿ ಏಷ್ಯಾ ರಾಷ್ಟ್ರಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಮುಕ್ತ ವ್ಯಾಪಾರ ಒಪ್ಪಂದವನ್ನು ಹೂಡಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ವಿಸ್ತರಿಸಲು ಏಷ್ಯಾ ರಾಷ್ಟ್ರಗಳ ಪ್ರಾಮಾಣಿಕ ಸಹಕಾರ, ಸ್ಪಂದನೆ ಅಗತ್ಯವಾಗಿದೆ ಎಂದು ಬಾಂಗ್ಲಾ, ಮೈನ್ಮಾರ್, ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಥೈಲ್ಯಾಂಡ್ ರಾಷ್ಟ್ರಗಳ ನಾಯಕರಿಗೆ ಪ್ರಧಾನಿ ಮನವಿ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಂದಂಕಿಗೆ ತಲುಪಿದ ಹಣದುಬ್ಬರ ದರ
ಮುಕೇಶ್ ಅಂಬಾನಿಗೆ' ಶ್ರೀಮಂತ ಭಾರತೀಯ' ಗರಿ
ಆರ್ಥಿಕ ಕುಸಿತ : ಐತಿಹಾಸಿಕವಾಗಲಿರುವ ಜಿ-20 ಶೃಂಗಸಭೆ
ಜನವರಿಯಿಂದ ವಿಮಾನ ದರದಲ್ಲಿ ಇಳಿಕೆ -ಪಟೇಲ್
ಇಂಧನ ತೆರಿಗೆ ರದ್ದು: ಏರ್‌ಏಷ್ಯಾ ಸಂಸ್ಥೆಯ ಸಾಧನೆ
ತೆರಿಗೆ ಸಂಗ್ರಹದಲ್ಲಿ ಶೇ.5ರಷ್ಟು ಇಳಿಕೆ