ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಅನಿಮೇಶನ್ ಚಲನಚಿತ್ರಗಳಿಗಾಗಿ ಅನಿಮೇಶನ್ ಪಾರ್ಕ್ ಮತ್ತು ಸ್ಟುಡಿಯೋಗಳನ್ನು ಸ್ಥಾಪಿಸುವುದರಿಂದ ಮುಂಬರುವ ಮೂರು ವರ್ಷಗಳಲ್ಲಿ ಎರಡು ಲಕ್ಷ ಹುದ್ದೆಗಳನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಪ್ರಕಟಿಸಿದೆ.

ಅನಿಮೇಶನ್ ಪಾರ್ಕ್‌ಗಳ ಸ್ಥಾಪನೆಯಿಂದಾಗಿ ಅನಿಮೇಶನ್ ವಿಭಾಗದಲ್ಲಿ ಪರಿಣಿತಿಯನ್ನು ಹೊಂದಿದ ಎರಡು ಲಕ್ಷ ನಿರುದ್ಯೋಗಿಗಳಿಗೆ ಮೂರು ವರ್ಷದಲ್ಲಿ ಉದ್ಯೋಗವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಅನಿಮೇಶನ್ ವಿಭಾಗದಲ್ಲಿ 9 ಸಾವಿರ ದಿಂದ 15 ಸಾವಿರವರೆಗೆ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲಿ 30 ಸಾವಿರ ಅನಿಮೇಶನ್ ತಜ್ಞರ ಅಗತ್ಯವಿದೆ ಎಂದು ಅಸೋಚಾಮ್ ತಿಳಿಸಿದೆ.

ಅನಿಮೇಶನ್ ಪಾರ್ಕ್ ಸ್ಥಾಪನೆಯಿಂದಾಗಿ ಅನಿಮೇಶನ್ ಉದ್ಯಮ ಮುಂಬರುವ 2010ರ ವೇಳೆಗೆ 1 ಬಿಲಿಯನ್ ಡಾಲರ್ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತುತ ಅನಿಮೇಶನ್ ಉದ್ಯಮ 450 ಮಿಲಿಯನ್ ಡಾಲರ್‌ಗಳ ವಹಿವಾಟು ನಡೆಸುತ್ತಿದೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ
ಏಕರೀತಿಯ ವ್ಯಾಟ್ ಜಾರಿಗೆ ಸರಕಾರ ನಿರ್ಧಾರ: ಸಹಾಯ್
ಆರ್ಥಿಕ ಬಿಕ್ಕಟ್ಟಿನ ಹೊರತಾಗಿ ಅಭಿವೃದ್ಧಿ: ಚಿದು ವಿಶ್ವಾಸ
ವ್ಯಾಪಾರ ಒಪ್ಪಂದಕ್ಕೆ ಪರಸ್ಪರ ಸಹಕಾರ ಅಗತ್ಯ
ಒಂದಂಕಿಗೆ ತಲುಪಿದ ಹಣದುಬ್ಬರ ದರ
ಮುಕೇಶ್ ಅಂಬಾನಿಗೆ' ಶ್ರೀಮಂತ ಭಾರತೀಯ' ಗರಿ