ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ಮಾಸಾಂತ್ಯದಲ್ಲಿ ತೈಲ ಉತ್ಪಾದನೆ ಕಡಿತಗೊಳಿಸುವ ನಿರ್ಧಾರವನ್ನು ಒಪೆಕ್ ಘೋಷಿಸಿದ ಹಿನ್ನೆಲೆಯಲ್ಲಿ ಏಷ್ಯಾ ಮಾರುಕಟ್ಟೆಯಲ್ಲಿ ಇಂದಿನ ತೈಲ ದರ ಪ್ರತಿ ಬ್ಯಾರೆಲ್‌ಗೆ 58 ಡಾಲರ್‌ ಏರಿಕೆ ಕಂಡಿದೆ ಎಂದು ತೈಲ ವಹಿವಾಟಿನ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಡಿಸೆಂಬರ್ ತಿಂಗಳ ತೈಲ ವಿತರಣಾ ದರ ಪ್ರತಿ ಬ್ಯಾರೆಲ್‌ಗೆ 2.08 ಡಾಲರ್ ಏರಿಕೆಯಾಗಿ 58.56 ಡಾಲರ್‌ಗೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಾಲ್‌ಸ್ಟ್ರೀಟ್ ಶೇರುಪೇಟೆಯಲ್ಲಿ ಶೇರುಸೂಚ್ಯಂಕ ಏರಿಕೆ ಕಂಡ ಹಿನ್ನೆಲೆಯಲ್ಲಿ ತೈಲ ದರಗಳಲ್ಲಿ ಕೂಡಾ ಏರಿಕೆಯಾಗಿವೆ ಎಂದು ಇಂಧನ ತಜ್ಞರಾದ ವಿಕ್ಟರ್ ಶಮ್ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಚ್ಚಾ ತೈಲ ದರ ಏರಿಕೆ ಅಥವಾ ಶೇರುಸೂಚ್ಯಂಕಗಳ ಏರಿಕೆ ಸ್ಥಿರವಾಗಿರುತ್ತದೆ ಎನ್ನುವ ನಂಬಿಕೆಯಿಲ್ಲ ಎಂದು ವಿಕ್ಟರ್ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ
ಏಕರೀತಿಯ ವ್ಯಾಟ್ ಜಾರಿಗೆ ಸರಕಾರ ನಿರ್ಧಾರ: ಸಹಾಯ್
ಆರ್ಥಿಕ ಬಿಕ್ಕಟ್ಟಿನ ಹೊರತಾಗಿ ಅಭಿವೃದ್ಧಿ: ಚಿದು ವಿಶ್ವಾಸ
ವ್ಯಾಪಾರ ಒಪ್ಪಂದಕ್ಕೆ ಪರಸ್ಪರ ಸಹಕಾರ ಅಗತ್ಯ
ಒಂದಂಕಿಗೆ ತಲುಪಿದ ಹಣದುಬ್ಬರ ದರ