ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೇರುಪೇಟೆಯಿಂದ ದೂರವಿರಲು ಬಯಸುವ ಹೂಡಿಕೆದಾರರಿಂದಾಗಿ ನೇರ ವಿದೇಶ ಬಂಡವಾಳ ಹೂಡಿಕೆ ನಿಧಾನಗತಿಯಲ್ಲಿ ಸಾಗಲಿದೆ ಎಂದು ಮೂಡಿ ಕಾರ್ಪೋರೇಶನ್ ವರದಿಯನ್ನು ಪ್ರಕಟಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಆರಂಭಿಕ ಆರು ತಿಂಗಳಲ್ಲಿ ನೇರ ವಿದೇಶಿ ಬಂಡವಾಳಹೂಡಿಕೆಯಲ್ಲಿ ಹೆಚ್ಚಳವಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಭಾರತ ಮತ್ತು ಚೀನಾ ದೇಶಗಳಲ್ಲಿ ನೇರ ವಿದೇಶ ಬಂಡವಾಳ ಹೂಡಿಕೆ ಕಡಿಮೆಯಾಗಲಿದೆ ಎಂದು ಮೂಡಿ ಎಕಾನಾಮಿ ಡಾಟ್ ಕಾಂ ವರದಿಯಲ್ಲಿ ತಿಳಿಸಿದೆ.

ಬಂಡವಾಳದ ಹೊರಹರಿವು ಹೆಚ್ಚಾಗಿರುವುದು ಭಾರತದ ಬಹುದೊಡ್ಡ ಕಳವಳಕ್ಕೆ ಕಾರಣವಾಗಿದೆ ಎಂದು ಮೂಡಿ ಎಕಾನಾಮಿ ಡಾಟ್ ಕಾಂ ಪ್ರಕಟಿಸಿದ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಭಾರತದ ಶೇರುಪೇಟೆಗಳಲ್ಲಿ ಹೂಡಿಕೆ ಮಾಡಿದ ವಿದೇಶಿ ಬಂಡವಾಳ ಹೂಡಿಕೆದಾರರು ಶೇರುಪೇಟೆ ಕುಸಿತ ಹಾಗೂ ರೂಪಾಯಿ ಅಪಮೌಲ್ಯದಿಂದಾಗಿ ಹತಾಶರಾಗಿದ್ದಾರೆ. ಬ್ಯಾಂಕ್‌ಗಳು ದಿವಾಳಿಯ ಅಂಚಿಗೆ ತಲುಪಿರುವುದರಿಂದ ದೇಶಕ್ಕೆ ಹೆಚ್ಚಿನ ವರಮಾನವನ್ನು ತರುತ್ತಿರುವ ಬ್ಯಾಂಕಿಂಗ್ ಕ್ಷೇತ್ರದ ಹೊರಗುತ್ತಿಗೆ ಕೂಡಾ ಕುಸಿಯುತ್ತಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ
ಏಕರೀತಿಯ ವ್ಯಾಟ್ ಜಾರಿಗೆ ಸರಕಾರ ನಿರ್ಧಾರ: ಸಹಾಯ್
ಆರ್ಥಿಕ ಬಿಕ್ಕಟ್ಟಿನ ಹೊರತಾಗಿ ಅಭಿವೃದ್ಧಿ: ಚಿದು ವಿಶ್ವಾಸ
ವ್ಯಾಪಾರ ಒಪ್ಪಂದಕ್ಕೆ ಪರಸ್ಪರ ಸಹಕಾರ ಅಗತ್ಯ