ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ಡಿಜಿಟಲ್ ಇಮೇಜಿಂಗ್ ಕಂಪೆನಿ ಕ್ಯಾನನ್ ಇಂಡಿಯಾ, ಡಾಲರ್‌ಗಳ ತೊಳಲಾಟದ ಹಿನ್ನೆಲೆಯಲ್ಲಿ ಅಮುದು ವೆಚ್ಚ ಗಣನೀಯವಾಗಿ ಏರಿಕೆ ಕಂಡಿದ್ದರಿಂದ ನವೆಂಬರ್ ಅಂತ್ಯದ ವೇಳೆಗೆ ಉತ್ಪಾದಕ ವಸ್ತುಗಳ ದರಗಳಲ್ಲಿ ಶೇ.5 ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಭಾರತದ ಕರೆನ್ಸಿಯ ಎದುರು ಡಾಲರ್‌ ಮೌಲ್ಯಗಳಲ್ಲಿ ಏರಿಕೆಯಿಂದಾಗಿ ಅಮುದು ವಹಿವಾಟು ವೆಚ್ಚದಲ್ಲಿ ಹೆಚ್ಚಳವಾಗಿರುವುದರಿಂದ ಡಿಜಿಟಲ್ ಇಮೇಜಿಂಗ್ ವಸ್ತುಗಳು ಹಾಗೂ ಕ್ಯಾಮರಾ ಸೇರಿದಂತೆ ಎಲ್ಲ ಉತ್ಪಾದಕ ವಸ್ತುಗಳ ದರಗಳಲ್ಲಿ ಶೇ.5 ರಷ್ಟು ಏರಿಕೆ ಮಾಡಲಾಗುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕ್ಯಾನನ್ ಇಂಡಿಯಾ ಕಂಪೆನಿ ಜಪಾನ್, ತೈವಾನ್, ಚೀನಾ ಮತ್ತು ಮಲೇಷಿಯಾಗಳಿಂದ ಭಾರತಕ್ಕೆ ಉತ್ಪಾದಕ ವಸ್ತುಗಳನ್ನು ಅಮುದು ಮಾಡುತ್ತಿದೆ ಎಂದು ಮಾರುಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ ಕಂಪೆನಿಯ ಉತ್ಪಾದಕ ವಸ್ತುಗಳ ಮಾರುಕಟ್ಟೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ
ಏಕರೀತಿಯ ವ್ಯಾಟ್ ಜಾರಿಗೆ ಸರಕಾರ ನಿರ್ಧಾರ: ಸಹಾಯ್
ಆರ್ಥಿಕ ಬಿಕ್ಕಟ್ಟಿನ ಹೊರತಾಗಿ ಅಭಿವೃದ್ಧಿ: ಚಿದು ವಿಶ್ವಾಸ