ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಜಾಗತಿಕ ಆರ್ಥಿಕ ನೀತಿಗಳ ಪರಿಷ್ಕರಣೆಗೆ ಭಾರತದ ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವೇಣುಗೋಪಾಲ್ ರೆಡ್ಡಿಯವರನ್ನು ವಿಶ್ವಸಂಸ್ಥೆಯ ವಿಧಾನಸಭಾ ಅಧ್ಯಕ್ಷ ಮಿಗ್ವೆಲ್ ಡಿ ಎಸ್ಕೊಟೊ ವಿಶ್ವಸಂಸ್ಥೆ ಯ ವಿಶೇಷ ದಳಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅಂತಾರಾಷ್ಟ್ರೀಯ ಮೇಲ್ವಿಚಾರಣೆ ಹಾಗೂ ಹಣಕಾಸು ವ್ಯವಸ್ಥೆಯ ನೀತಿಯನಿಯಮಗಳನ್ನು ಸಿದ್ದಪಡಿಸಲು ಆರ್ಥಿಕ ಕ್ಷೇತ್ರದ ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕದ ಜೊಸೆಫ್ ಸ್ಟಿಗ್ಲಿಟ್ಜ್ ಅವರ ನೇತೃತ್ವದಲ್ಲಿ 10 ಮಂದಿ ಪರಿಣಿತರ ತಂಡವನ್ನು ವಿಶ್ವಸಂಸ್ಥೆಗೆ ನೇಮಕ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಹತ್ತು ಮಂದಿ ಆರ್ಥಿಕ ತಜ್ಞರ ಆಯೋಗ, ರಾಷ್ಟ್ರಗಳಿಗೆ ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಸಲಹೆಗಳನ್ನು ನೀಡುತ್ತಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಎನ್ರಿಕ್ ಯೆವ್ಸ್ ತಿಳಿಸಿದ್ದಾರೆ.

ಹತ್ತು ಮಂದಿ ಸದಸ್ಯರ ಆಯೋಗ ಮುಂಬರುವ ಡಿಸೆಂಬರ್, ಜನೆವರಿ ಮತ್ತು ಮಾರ್ಚ್ ತಿಂಗಳಲ್ಲಿ ಸಭೆಯನ್ನು ನಡೆಸಲಿದೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ
ಏಕರೀತಿಯ ವ್ಯಾಟ್ ಜಾರಿಗೆ ಸರಕಾರ ನಿರ್ಧಾರ: ಸಹಾಯ್