ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಾಂಡೋಮ್ ಮಾರಾಟದಲ್ಲಿ ಹೆಚ್ಚಳ: ನಾಕೊ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಡೋಮ್ ಮಾರಾಟದಲ್ಲಿ ಹೆಚ್ಚಳ: ನಾಕೊ
ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಕಾಂಡೋಮ್ ಮಾರಾಟದಲ್ಲಿ ಶೇ.5 ರಷ್ಟು ಹೆಚ್ಚಳವಾಗಿದೆ ಎಂದು ನ್ಯಾಷನಲ್ ಏಡ್ಸ್‌ ಕಂಟ್ರೋಲ್ ಆರ್ಗನೈಜೇಶನ್( ನಾಕೊ) ಪ್ರಕಟಿಸಿದೆ.

ನಾಕೊ ಸಂಸ್ಥೆ, ಕಾಂಡೋಮ್‌ನ್ನು ಮತ್ತೊಂದು ಆರೋಗ್ಯ ಉತ್ಪನ್ನದಂತೆ ಬಿಂಬಿಸಿ ವ್ಯಾಪಕ ಪ್ರಚಾರ ನೀಡಿದ ಹಿನ್ನೆಲೆಯಲ್ಲಿ ಆರು ತಿಂಗಳಲ್ಲಿ ಶೇ.5ರಷ್ಟು ಕಾಂಡೋಮ್ ಮಾರಾಟದಲ್ಲಿ ಹೆಚ್ಚಳವನ್ನು ನೊಂದಾಯಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕಾಂಡೋಮ್ ಬಳಕೆ ಕುರಿತಂತೆ ಮುಕ್ತ ಚರ್ಚೆಯಲ್ಲಿ ನಾಗರಿಕರನ್ನು ಹುರಿದುಂಬಿಸಿ ಕಾಂಡೋಮ್ ಸಾಮಾಜಿಕವಾಗಿ ಸಮ್ಮತಿಸುವ ಸುರಕ್ಷಿತ ಕವಚ ಎನ್ನುವ ಗುರಿಯಿಂದ ಪ್ರಚಾರ ನಡೆಸಿದ್ದರಿಂದ ಕಾಂಡೋಮ್ ಮಾರಾಟದಲ್ಲಿ ಏರಿಕೆ ಕಂಡಿದೆ ಎಂದು ನಾಕೊ ಪ್ರಧಾನ ನಿರ್ದೇಶಕಿ ಕೆ.ಸುಜಾತಾ ರಾವ್ ತಿಳಿಸಿದ್ದಾರೆ.

ಟಿ .ವಿ ಚಾನೆಲ್‌ಗಳು, ರೇಡಿಯೋ ಜಾಹೀರಾತು ಮತ್ತು ಮೊಬೈಲ್ ರಿಂಗ್‌ಟೋನ್‌ಗಳ ಮೂಲಕ 15 ಕೋಟಿ ಯುವಕರಿಗೆ ಸುರಕ್ಷಿತ ಲೈಂಗಿಕತೆ ಗಾಗಿ ಕಾಂಡೋಮ್ ಬಳಕೆಯ ಪ್ರಚಾರ ನೀಡಲಾಯಿತು ಎಂದು ವಿವರಿಸಿದ್ದಾರೆ.

ನ್ಯಾಷನಲ್ ಏಡ್ಸ್‌ ಕಂಟ್ರೋಲ್ ಆರ್ಗನೈಜೇಶನ್ ಮತ್ತು ಬಿಬಿಸಿ ವರ್ಲ್ಡ್ ಸರ್ವಿಸ್ ಟ್ರಸ್ಟ್ ಜಂಟಿ ಸಹಭಾಗಿತ್ವದಲ್ಲಿ ಕಂಡೋಮ್ ,ಕಾಂಡೋಮ್, ಕಾಂಡೋಮ್ ಎನ್ನುವ ರಿಂಗ್‌ಟೋನ್‌ಗಳನ್ನು ಜಾಹೀರಾತಿನ ಮೂಲಕ ಪ್ರಚಾರ ಮಾಡಿರುವುದು ಉತ್ತಮ ಫಲಿಂತಾಶ ನೀಡಿತು.

ಭಾರತದಲ್ಲಿಯೇ ರಿಂಗ್‌ಟೋನ್‌ಗಳನ್ನು ಡೌನ್‌ಲೋಡ್ ಮಾಡಲು 5 ಲಕ್ಷ ಮನವಿಗಳು ಬಂದವು. ಉಳಿದ ದೇಶಗಳಿಂದ 160,000 ಮನವಿಗಳು ಬಂದಿವೆ ಎಂದು ಬಿಬಿಸಿ ವರ್ಲ್ಡ್ ಟ್ರಸ್ಟ್‌ನ ನಿರ್ದೇಶಕರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ
ಸಾಂಟ್ರೊಗಿಂತ ಚಿಕ್ಕ ಕಾರು ಬಿಡುಗಡೆ: ಹುಂಡೈ