ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಪೆಕ್ ಸೂಚನೆಗೆ ಹಿನ್ನೆಡೆ:ತೈಲ ದರ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪೆಕ್ ಸೂಚನೆಗೆ ಹಿನ್ನೆಡೆ:ತೈಲ ದರ ಕುಸಿತ
ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಒಪೆಕ್ ಸೂಚನೆ ನೀಡಿದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ 1.20 ಡಾಲರ್‌ಗಳ ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 57.04 ಡಾಲರ್‌ಗೆ ತಲುಪಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಮಾರುಕಟ್ಟೆಯ ಡಿಸೆಂಬರ್ ತಿಂಗಳ ವಿತರಣೆಯಲ್ಲಿ ತೈಲ ದರ 1.20 ಡಾಲರ್‌ ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 57.04 ಡಾಲರ್‌ಗೆ ಸ್ಥಿರವಾಗಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ

ಅಕ್ಟೋಬರ್ ತಿಂಗಳಿನಲ್ಲಿ ಚಿಲ್ಲರೆ ವಹಿವಾಟುದಾರರ ತೈಲ ಮಾರಾಟದಲ್ಲಿ ಶೇ.2.8 ರಷ್ಟು ಇಳಿಕೆ ಕಂಡಿದೆ. 2001ರಲ್ಲಿ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಶೇ.2.65ರಷ್ಟು ಇಳಿಕೆ ಕಂಡಿತ್ತು ಎಂದು ಅಮೆರಿಕ ವಾಣಿಜ್ಯ ಇಲಾಖೆ ಸಲ್ಲಿಸಿದ ವರದಿಯಲ್ಲಿ ಪ್ರಕಟಿಸಿದೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ವಾಹನಗಳ ಮಾರಾಟ ಕುಸಿತ ಸೇರಿದಂತೆ ಗೃಹೋಪಕರಣ ವಸ್ತುಗಳಿಂದ ಜವಳಿ ವಸ್ತುಗಳವರೆಗೆ ಗ್ರಾಹಕರ ಖರೀದಿಯಲ್ಲಿ ಇಳಿಕೆಯಾಗಿರುವುದು ತೈಲ ದರಗಳ ಇಳಿಕೆಗೆ ಕಾರಣವಾಗಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಡೋಮ್ ಮಾರಾಟದಲ್ಲಿ ಹೆಚ್ಚಳ: ನಾಕೊ
ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ
ನೇರ ಬಂಡವಾಳ ಹೂಡಿಕೆಯಲ್ಲಿ ಹಿನ್ನೆಡೆ: ಮೂಡಿ
ಏಷ್ಯಾ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳ
ನಿರುದ್ಯೋಗಿಗಳಿಗೆ ಅನಿಮೇಶನ್ ವರದಾನ