ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಸುಧಾರಣೆಗೆ ಆರು ತಿಂಗಳು ಅಗತ್ಯ :ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಸುಧಾರಣೆಗೆ ಆರು ತಿಂಗಳು ಅಗತ್ಯ :ಚಿದಂಬರಂ
ಜಾಗತಿಕ ಆರ್ಥಿಕ ಕುಸಿತ ಎಲ್ಲ ಕ್ಷೇತ್ರಗಳ ಆರ್ಥಿಕತೆಗೆ ಧಕ್ಕೆ ತಂದಿದ್ದರೂ ಮುಂಬರುವ 6 ರಿಂದ 9 ತಿಂಗಳಲ್ಲಿ ಮರಳಿ ಸುಸ್ಥಿತಿಗೆ ಬರಲಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

ದೇಶದ ಪ್ರತಿಯೊಂದು ಆರ್ಥಿಕ ವಹಿವಾಟಿನ ಕ್ಷೇತ್ರಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು ಕಂಪೆನಿಗಳು ಭಾರಿ ಪ್ರಮಾಣದ ತೊಂದರೆಯನ್ನು ಎದುರಿಸುತ್ತಿವೆ. ಆರ್ಥಿಕ ಕುಸಿತ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಮುಂಬರುವ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಫಲ ನೀಡಲಿವೆ ಎಂದು ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಸತತ ನಾಲ್ಕು ವರ್ಷಗಳಿಂದ ಶೇ.9 ರ ಅಭಿವೃದ್ಧಿ ದರದಲ್ಲಿ ಸಾಗುತ್ತಿದೆ. ಅನೇಕ ಮೂಲಗಳ ಪ್ರಕಾರ ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಅಭಿವೃದ್ಧಿ ದರದ ಮೇಲೆ ಶೇ.1 ರಿಂದ ಶೇ.2 ರಷ್ಟು ಮಾತ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ದರದ ಏರಿಕೆ ಅಥವಾ ಇಳಿಕೆಯನ್ನು ಪರಿಶೀಲನೆ ಕೇಂದ್ರ ಸರಕಾರಕ್ಕೆ ಅಗತ್ಯವಿಲ್ಲ . ಜಗತ್ತಿನಲ್ಲಿ ಬೃಹತ್ ರಾಷ್ಟ್ರವಾದ ಚೀನಾವನ್ನು ಹೊರತುಪಡಿಸಿದರೆ ಭಾರತ ಮಾತ್ರ ಶೇ.7 ರಿಂದ ಶೇ.8 ರಷ್ಟು ಅಭಿವೃದ್ಧಿ ದರವನ್ನು ಹೊಂದಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಡವಾಳ ಹೂಡಿಕೆಗೆ ಅರಬ್ ದೇಶ ಒಲವು: ಸಿಎಂ
ವಿಮಾನ ಇಂಧನ ಬೆಲೆ ಮತ್ತಷ್ಟು ಅಗ್ಗ
ಒಪೆಕ್ ಸೂಚನೆಗೆ ಹಿನ್ನೆಡೆ:ತೈಲ ದರ ಕುಸಿತ
ಕಾಂಡೋಮ್ ಮಾರಾಟದಲ್ಲಿ ಹೆಚ್ಚಳ: ನಾಕೊ
ವಿಶ್ವಸಂಸ್ಥೆಗೆ ಮಾಜಿ ಆರ್‌ಬಿಐ ಗವರ್ನರ್ ರೆಡ್ಡಿ ನೇಮಕ
ಕ್ಯಾನನ್ ಉತ್ಪನ್ನಗಳ ದರಗಳಲ್ಲಿ ಶೇ.5ರಷ್ಟು ಹೆಚ್ಚಳ