ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಧನ ಮಾರಾಟ ತೆರಿಗೆ: ರಾಜ್ಯಗಳಿಗೆ ಸಲಹೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ಮಾರಾಟ ತೆರಿಗೆ: ರಾಜ್ಯಗಳಿಗೆ ಸಲಹೆ
ವೈಮಾನಿಕ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟುಗಳ ನಿವಾರಣೆಗೆ ಉನ್ನತ ಮಟ್ಟದ ಸಮಿತಿ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲಿ ಇಂಧನ ಮಾರಾಟ ತೆರಿಗೆ ಕಡಿತ ಕುರಿತಂತೆ ರಾಜ್ಯ ಸರಕಾರಗಳಿಗೆ ಸಲಹೆ ನೀಡಲಿದೆ ಎಂದು ಸಮಿತಿಯ ಮೂಲಗಳು ತಿಳಿಸಿವೆ.

ಇಂಧನ ಮಾರಾಟ ತೆರಿಗೆ ಕೆಲ ರಾಜ್ಯಗಳಲ್ಲಿ ಶೇ.25ರಿಂದ 30ರಷ್ಟು ಹೆಚ್ಚಳವನ್ನು ವಿಮಾನಯಾನ ಸಂಸ್ಥೆಗಳು ಅಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯೆಲ್ಲಿ ಇಂಧನಮಾರಾಟ ತೆರಿಗೆ ಕುರಿತಂತೆ ಪರಿಶೀಲಿಸಲಾಗುತ್ತಿದೆ ಎಂದು ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ಹೇಳಿದ್ದಾರೆ.

ವೈಮಾನಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್, ಸಂಪುಟ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಸಚಿವಾಲಯ ರಾಜ್ಯಗಳ ಹಣಕಾಸು ಸಚಿವರುಗಳೊಂದಿಗೆ ಮಾತುಕತೆ ನಡೆಸಿದ್ದು,ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
25 ಸಾವಿರ ಉದ್ಯೋಗಿಗಳ ನೇಮಕ: ಇನ್ಫೋಸಿಸ್
ಎಸ್‌ಬಿಐ:25ಸಾವಿರ ಉದ್ಯೋಗಿಗಳ ನೇಮಕ
ಆರ್ಥಿಕ ಸುಧಾರಣೆಗೆ ಆರು ತಿಂಗಳು ಅಗತ್ಯ :ಚಿದಂಬರಂ
ಬಂಡವಾಳ ಹೂಡಿಕೆಗೆ ಅರಬ್ ದೇಶ ಒಲವು: ಸಿಎಂ
ವಿಮಾನ ಇಂಧನ ಬೆಲೆ ಮತ್ತಷ್ಟು ಅಗ್ಗ
ಒಪೆಕ್ ಸೂಚನೆಗೆ ಹಿನ್ನೆಡೆ:ತೈಲ ದರ ಕುಸಿತ