ಮ್ಯೂಚುವಲ್ ಫಂಡ್ ಮೂಲಕ ಶೇರುಪೇಟೆಯಲ್ಲಿ ಹೂಡಿಕೆ ಮಾಡಲು ಪ್ರಸಕ್ತ ಸ್ಥಿತಿ ಸೂಕ್ತವಾಗಿದೆ ಎಂದು ಅಸೋಸಿಯೇಶನ್ ಆಫ್ ಮ್ಯೂಚುವಲ್ ಫಂಡ್ಸ್ ಆಫ್ ಇಂಡಿಯಾ ಅಧ್ಯಕ್ಷ ಎ.ಪಿ. ಕುರಿಯನ್ ಸಲಹೆ ನೀಡಿದ್ದಾರೆ.
ಶೇರುಪೇಟೆಯಲ್ಲಿ ಶೇರುದರಗಳು ಆಕರ್ಷಣಿಯವಾಗಿರುವುದರಿಂದ ಹೂಡಿಕೆದಾರರಿಗೆ ಹೂಡಿಕೆ ಮಾಡಲು ತಕ್ಕ ಸಮಯವಾಗಿದೆ ಎಂದು ಕುರಿಯನ್ ಡನ್ ಬ್ರಾಡ್‌ಸ್ಟ್ರೀಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆದರೆ ಹೂಡಿಕೆದಾರರು ಕಡಿಮೆ ಅವಧಿಗೆ ಲಾಭವನ್ನು ನಿರೀಕ್ಷಿಸುವಂತಿಲ್ಲ. ಮೂರು ವರ್ಷಗಳ ಅವಧಿಯ ನಂತರ ಲಾಭ ದೊರೆಯುತ್ತದೆ ಎಂದು ಕುರಿಯನ್ ತಿಳಿಸಿದ್ದಾರೆ.
ಶೇರುಪೇಟೆಗಳಲ್ಲಿ ಶೇರುಸೂಚ್ಯಂಕಜ ಏರಿಕೆ ಇಳಿಕೆ ಸರ್ವೆಸಾಮಾನ್ಯ. ಆದರೆ ಹೂಡಿಕೆದಾರರು ಶೇರುಪೇಟೆಯ ಮೇಲೆ ನಂಬಿಕೆಯಿರಿಸಿ ಹೆಚ್ಚಿನ ಅವಧಿಗೆ ಹೂಡಿಕೆ ಮಾಡುವುದರಿಂದ ಲಾಭವನ್ನು ಪಡೆಯಬಹುದು ಎಂದು ಕುರಿಯನ್ ಸಲಹೆ ನೀಡಿದ್ದಾರೆ. |