ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಿಟಿ ಗ್ರೂಪ್‌ನಿಂದ 50 ಸಾವಿರ ಹುದ್ದೆ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಟಿ ಗ್ರೂಪ್‌ನಿಂದ 50 ಸಾವಿರ ಹುದ್ದೆ ಕಡಿತ
ಜಾಗತಿಕ ಆರ್ಥಿಕ ಕುಸಿತ ಹಾಗೂ ಪ್ರಸಕ್ತ ಅಮೆರಿಕದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಮೆರಿಕ ಮೂಲದ ಸಿಟಿ ಗ್ರೂಪ್‌ ಬ್ಯಾಂಕ್‌ ಸುಮಾರು 50 ಸಾವಿರ ಹುದ್ದೆಗಳನ್ನು ಕಡಿಗೊಳಿಸಲು ನಿರ್ಧರಿಸಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಜನೆವರಿಯಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 23 ಸಾವಿರ ಹುದ್ದೆಗಳನ್ನು ಕಡಿತಗೊಳಿಸಲಾಗಿದ್ದು, ಮತ್ತೆ ಮಂಬರುವ ವರ್ಷದ ಆರಂಭದಲ್ಲಿ 30 ಸಾವಿರ ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಲಾಗಿದೆ.

ಸಿಟಿ ಗ್ರೂಪ್‌ ಶೇರುಗಳು ಅಮೆರಿಕದ ಶೇರುಪೇಟೆಯಲ್ಲಿ ಒಂದಂಕಿಗೆ ಕುಸಿದ ಹಿನ್ನೆಲೆಯಲ್ಲಿ ಸಿಟಿ ಗ್ರುಪ್ ಮುಖ್ಯಸ್ಥ ವಿಕ್ರಂ ಪಂಡಿತ್, ವೆಚ್ಚ ಕಡಿತಕ್ಕೆ ಅನುಗುಣವಾಗಿ 50 ಸಾವಿರ ಹುದ್ದೆಗಳನ್ನು ಕಡಿತ ಮಾಡಲಾಗುವುದು ಎಂದು ಘೋಷಿಸಿದರು.

ಕಳೆದ ಡಿಸೆಂಬರ್‌ನಲ್ಲಿ ಸಿಟಿ ಗ್ರೂಪ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹೂಡಿಕೆದಾರರಿಂದ ಟೀಕೆಗಳನ್ನು ಎದುರಿಸಬೇಕಾಗಿ ಬಂದು ಸಿಟಿ ಗ್ರುಪ್ ಕಾರ್ಯನಿರ್ವಹಣೆ ಕುರಿತಂತೆ ಹೂಡಿಕೆದಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಮೂಲದ ಸಿಟಿ ಗ್ರೂಪ್‌, ಕಳೆದ ವರ್ಷದ ಅವಧಿಯಲ್ಲಿ 20 ಬಿಲಿಯನ್ ಡಾಲರ್‌ಗಳ ನಷ್ಟವನ್ನು ಎದುರಿಸಿದ್ದು, 2010ರೊಳಗೆ ಬ್ಯಾಂಕ‌್ ಲಾಭದತ್ತ ಮರಳಲು ಸಾಧ್ಯವಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಸಿಟಿ ಗ್ರೂಪ್‌ ಶೇರುಗಳು ಶೇ.68 ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಸಿಟಿ ಗ್ರೂಪ್‌ ಬ್ಯಾಂಕ್ 51.9 ಬಿಲಿಯನ್ ಡಾಲರ್‌ ಬೆಲೆಬಾಳಲಿದ್ದು, ಅಮೆರಿಕದ ಖಜಾನೆ ಇಲಾಖೆಯಿಂದ 25 ಬಿಲಿಯನ್ ಡಾಲರ್‌ ಬೇಲೌಟ್ ಸಾಲವನ್ನು ಪಡೆದಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು : ಪ್ರಧಾನಿ ಗವರ್ನರ್ ಚರ್ಚೆ
ಆರ್ಥಿಕ ಬಿಕ್ಕಟ್ಟು ಶೀಘ್ರ ಅಂತ್ಯ-ಚಿದಂಬರಂ
ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರಶಸ್ತ ಸಮಯ : ಕುರಿಯನ್
ಇಂಧನ ಮಾರಾಟ ತೆರಿಗೆ: ರಾಜ್ಯಗಳಿಗೆ ಸಲಹೆ
25 ಸಾವಿರ ಉದ್ಯೋಗಿಗಳ ನೇಮಕ: ಇನ್ಫೋಸಿಸ್
ಎಸ್‌ಬಿಐ:25ಸಾವಿರ ಉದ್ಯೋಗಿಗಳ ನೇಮಕ