ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ
ವಿದೇಶಿ ವಿನಿಮಯ ಮಾರುಕಟ್ಟೆಯ ಮಂಗಳವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 37 ಪೈಸೆಗಳ ಕುಸಿತ ಕಂಡು ಪ್ರತಿ ಡಾಲರ್‌ಗೆ 49.71/72 ರೂ.ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹಿಂದಿನ ದಿನದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಡಾಲರ್ ಎದುರು ದುರ್ಬಲವಾಗಿ 49.34/35ರೂಪಾಯಿಗಳಿಗೆ ತಲುಪಿತ್ತು. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿತವಾಗಿ ಪ್ರತಿ ಡಾಲರ್‌ಗೆ 49.71/72 ರೂಪಾಯಿಗಳಿಗೆ ತಲುಪಿದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶೇರುಪೇಟೆಗಳ ಬಂಡವಾಳದ ಹೊರಹರಿವು ಹೆಚ್ಚಾಗಿರುವುದರಿಂದ ದೇಶಿಯ ಕರೆನ್ಸಿ ರೂಪಾಯಿ ಮೇಲೆ ಹೆಚ್ಚಿನ ಒತ್ತಡ ಬೀರಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ, ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿ ಹೊರಹೋಗುತ್ತಿರುವ ಬಂಡವಾಳದ ಹರಿವು ಮುಂಬರುವ ಒಂದೆರಡು ತಿಂಗಳಲ್ಲಿ ಮರಳಿ ಸುಸ್ಥಿತಿಗೆ ಬರಲಿದೆ ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸೂಕ್ತ ಕ್ರಮ:ಆರ್‌ಬಿಐ
ಯಾಂಗ್ ಬದಲಾವಣೆಗೆ ಯಾಹೂ ಸಿದ್ದತೆ
ಸಿಟಿ ಗ್ರೂಪ್‌ನಿಂದ 50 ಸಾವಿರ ಹುದ್ದೆ ಕಡಿತ
ಆರ್ಥಿಕ ಬಿಕ್ಕಟ್ಟು : ಪ್ರಧಾನಿ ಗವರ್ನರ್ ಚರ್ಚೆ
ಆರ್ಥಿಕ ಬಿಕ್ಕಟ್ಟು ಶೀಘ್ರ ಅಂತ್ಯ-ಚಿದಂಬರಂ
ಮಾರುಕಟ್ಟೆಯಲ್ಲಿ ಹೂಡಿಕೆಗೆ ಪ್ರಶಸ್ತ ಸಮಯ : ಕುರಿಯನ್