ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದರ ಕಡಿತ: ಚಿದಂಬರಂ ಮನವಿಗೆ ಉದ್ಯಮಿಗಳ ನಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ ಕಡಿತ: ಚಿದಂಬರಂ ಮನವಿಗೆ ಉದ್ಯಮಿಗಳ ನಕಾರ
ನವದೆಹಲಿ : ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ,ದರಗಳನ್ನು ಇಳಿಕೆ ಮಾಡುವಂತೆ ಕೈಗಾರಿಕೋದ್ಯಮಿಗಳಿಗೆ ನೀಡಿದ ಸಲಹೆಯನ್ನು ಕೈಗಾರಿಕೋದ್ಯಮಿಗಳು ತಿರಸ್ಕರಿಸಿದ್ದಾರೆ.

ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿಕೆಗೆ ಪ್ರತಿಕ್ರಯಿಸಿದ ಖ್ಯಾತ ಉದ್ಯಮಿ ರಾಹುಲ್ ಬಜಾಜ್, ದರ ಕಡಿತದಿಂದ ಮಾರುಕಟ್ಟೆ ವೃದ್ಧಿಸುತ್ತದೆ ಎನ್ನುವುದಕ್ಕೆ ಆಧಾರವಿಲ್ಲ. ದರ ಕಡಿತದಿಂದ ಬೇಡಿಕೆಯಲ್ಲಿ ಹೆಚ್ಚಳವಾಗುತ್ತದೆ ಎಂದು ಕೈಗಾರಿಕೋದ್ಯಮಿಗಳು ಭಾವಿಸಿಲ್ಲ ಎಂದು ಹೇಳಿದ್ದಾರೆ.

ದ್ವಿಚಕ್ರವಾಹನ ಕೈಗಾರಿಕೋದ್ಯಮ ಕೇವಲ ಶೇ.4-5 ರಷ್ಟು ಲಾಭವನ್ನು ಪಡೆಯುತ್ತಿರುವುದರಿಂದ,ಮುಂಬರುವ ದಿನಗಳಲ್ಲಿ ಕೂಡಾ ದರ ಕಡಿತ ಸಾಧ್ಯವಿಲ್ಲ ಎಂದು ಬಜಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದ್ವಿಚಕ್ರವಾಹನ ಉತ್ಪಾದನೆಯಲ್ಲಿ ಇಂಧನ, ವಿದ್ಯುತ್ ದರ ಸೇರಿದಂತೆ ಮತ್ತಿತರ ವೆಚ್ಚಗಳಲ್ಲಿ ಏರಿಕೆಯಾಗುತ್ತಿವೆ.ಇಂತಹ ಸಂದರ್ಭದಲ್ಲಿ ಉತ್ಪಾದಕ ವಸ್ತುಗಳ ದರಗಳಲ್ಲಿ ಇಳಿಕೆ ಮಾಡಲು ಹೇಗೆ ಸಾಧ್ಯ ಎಂದು ಹೀರೊ ಹೊಂಡಾ ಕಂಪೆನಿಯ ಮುಖ್ಯಸ್ಥ ಬ್ರಿಜ್ ಮೋಹನ್‌ಲಾಲ್ ಮುಂಜಾಲ್ ಪ್ರಶ್ನಿಸಿದ್ದಾರೆ.

ರಿಯಲ್‌ ಎಸ್ಟೇಟ್ ಉದ್ಯಮಿ ಕೆ.ಪಿ.ಸಿಂಗ್ ಮಾತನಾಡಿ ಮಾರುಕಟ್ಟೆಯ ಒತ್ತಡದ ಮೇಲೆ ದರಗಳು ಅವಲಂಬಿತವಾಗಿರುತ್ತವೆ. ಸರಕಾರ ಸಂಸತ್ತಿನಲ್ಲಿ ದರ ಇಳಿಕೆ ಕುರಿತಂತೆ ಮಸೂದೆಯನ್ನು ಮಂಡಿಸಿ ಮೊದಲ ಹೆಜ್ಜೆಯನ್ನು ಕಂಪೆನಿಗಳು ಅವರನ್ನು ಬೆಂಬಲಿಸುತ್ತವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹುದ್ದೆಗಳ ಕಡಿತದ ಅವಶ್ಯಕತೆಯಿಲ್ಲ: ಮಾಂಟೆಕ್
ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ
ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸೂಕ್ತ ಕ್ರಮ:ಆರ್‌ಬಿಐ
ಯಾಂಗ್ ಬದಲಾವಣೆಗೆ ಯಾಹೂ ಸಿದ್ದತೆ
ಸಿಟಿ ಗ್ರೂಪ್‌ನಿಂದ 50 ಸಾವಿರ ಹುದ್ದೆ ಕಡಿತ
ಆರ್ಥಿಕ ಬಿಕ್ಕಟ್ಟು : ಪ್ರಧಾನಿ ಗವರ್ನರ್ ಚರ್ಚೆ