ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ಯಾಂಗ್' ನಿರ್ಗಮನದಿಂದ ಶೇರುದರಗಳಲ್ಲಿ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಯಾಂಗ್' ನಿರ್ಗಮನದಿಂದ ಶೇರುದರಗಳಲ್ಲಿ ಏರಿಕೆ
ಯಾಹೂ ಅಂತರ್ಜಾಲ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆರ್ರಿ ಯಾಂಗ್ ಅವರನ್ನು ಶೀಘ್ರದಲ್ಲಿ ಹುದ್ದೆಯಿಂದ ಬದಲಿಸಲಾಗುವುದು ಎಂದು ಅಡಳಿತ ಮಂಡಳಿಯ ಹೇಳಿಕೆಯ ಹಿನ್ನೆಲೆಯಲ್ಲಿ ಮಂಗಳವಾರದ ಶೇರುಪೇಟೆಯಲ್ಲಿ ಶೇ. 4 ರಷ್ಟು ಶೇರುದರಗಳು ಏರಿಕೆಯಾಗಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜೆರ್ರಿ ಯಾಂಗ್ ಮತ್ತೆ ಯಾಹೂ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಲಿದ್ದು, ತಂತ್ರಜ್ಞಾನ ಮತ್ತು ಯೋಜನೆಯನ್ನು ಸಾಧಿಸಲು ಅನುಸರಿಸುವ ನಿಯಮಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದ್ದಾರೆ.ಯಾಹೂ ಕಂಪೆನಿಯನ್ನು ಖರೀದಿಸಲು ಆಸಕ್ತಿ ವಹಿಸಿದ್ದ ಮೈಕ್ರೋಸಾಫ್ಟ್‌ ಕಂಪೆನಿಗೆ ಯಾಂಗ್ ಅಡ್ಡಿಯಾಗಿದ್ದರು ಎಂದು ಶೇರುದಾರರು ಅಸಮಧಾನ ವ್ಯಕ್ತಪಡಿಸಿದ್ದರು.

ಎದುರಾಳಿ ಕಂಪೆನಿಯಾದ ಗೂಗಲ್, ಸರ್ಚ್ ಜಾಹೀರಾತು ಪಾಲುದಾರಿಕೆಯಲ್ಲಿ ಯಾಹೂ ಸಂಸ್ಥೆಯ ಕೈ ಬಿಟ್ಟ ಹಿನ್ನೆಲೆಯಲ್ಲಿ ಹೂಡಿಕೆದಾರರು ಹಾಗೂ ತಜ್ಞರಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜೆರ್ರಿ ಯಾಂಗ್ ಭಾರಿ ಟೀಕೆಗೆ ಒಳಗಾಗಿ, ಅಧಿಕಾರವನ್ನು ತ್ಯಜಿಸುವಂತೆ ಅಡಳಿತ ಮಂಡಳಿಯ ಮೂಲಕ ಹೂಡಿಕೆದಾರರು ಒತ್ತಡ ತಂದಿದ್ದರು ಎನ್ನಲಾಗಿದೆ.

ಜೂನ್ 2007ರಲ್ಲಿ ಯಾಹೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಯಾಂಗ್,ಯಾಹೂ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದರಿಂದ ಅಂತರ್ಜಾಲ ಸಂಸ್ಥೆಯನ್ನು ಬಲಪಡಿಸುವರೆನ್ನುವ ವಿಶ್ವಾಸ ಹೂಡಿಕೆದಾರರಲ್ಲಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದರ ಕಡಿತ: ಚಿದಂಬರಂ ಮನವಿಗೆ ಉದ್ಯಮಿಗಳ ನಕಾರ
ಹುದ್ದೆಗಳ ಕಡಿತದ ಅವಶ್ಯಕತೆಯಿಲ್ಲ: ಮಾಂಟೆಕ್
ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ
ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಸೂಕ್ತ ಕ್ರಮ:ಆರ್‌ಬಿಐ
ಯಾಂಗ್ ಬದಲಾವಣೆಗೆ ಯಾಹೂ ಸಿದ್ದತೆ
ಸಿಟಿ ಗ್ರೂಪ್‌ನಿಂದ 50 ಸಾವಿರ ಹುದ್ದೆ ಕಡಿತ