ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ ನೂತನ 'ಎ ಸ್ಟಾರ್ ' ಮಾಡೆಲ್ ಕಾರನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಆರಂಭಿಕ ದರ 3.47 ಲಕ್ಷ ರೂಪಾಯಿಗಳಾಗಿದ್ದು ,ಇನ್ನಿತರ ವೆಚ್ಚಗಳು ಸೇರಿ ಒಟ್ಟು 4.12 ಲಕ್ಷ ರೂಗಳಿಗೆ ಲಭ್ಯವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ
ಅಕ್ಟೋಬರ್ ತಿಂಗಳ ಕಾರು ಮಾರಾಟದಲ್ಲಿ ಶೇ. 7 ರಷ್ಟು ಕುಸಿತವಾಗಿದ್ದು, ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಕಾರು ತಯಾರಿಕೆ ಕಂಪೆನಿಗಳಿಗೆ ಕಠಿಣವಾದ ಸಮಯವಾಗಿದ್ದರೂ 'ಎ ಸ್ಟಾರ್ 'ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಯಾಂಕ್ ಪರೀಕ್ ಹೇಳಿದ್ದಾರೆ.
ಮಾನೆಸರ್‌ನಲ್ಲಿರುವ ಘಟಕದಲ್ಲಿ 'ಎ ಸ್ಟಾರ್' ಕಾರುಗಳನ್ನು ತಯಾರಿಸಲಾಗುತ್ತಿದ್ದು, ಭಾರತದಲ್ಲಿ 50 ಸಾವಿರ ಹಾಗೂ ವಿದೇಶಗಳಲ್ಲಿ ಒಂದು ಲಕ್ಷ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಅಟೋಮೋಟಿವ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾದ ಪ್ರಕಾರ 'ಎ ಸ್ಟಾರ್ ' ಮಾಡೆಲ್ ಕಾರು ಪ್ರತಿ ಲೀಟರ್‌ಗೆ 19.59 ಕಿ.ಮಿ.ಸರಾಸರಿ ನೀಡಲಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರು ತಯಾರಿಕೆ ಉದ್ಯಮ ಅಕ್ಟೋಬರ್ ತಿಂಗಳಿನಲ್ಲಿ ಶೇ.6.59 ರಷ್ಟು ಇಳಿಕೆಯಾಗಿದ್ದು, ಗ್ರಾಹಕರು ನೂತನ ಮಾದರಿಯ ಕಾರುಗಳನ್ನು ಖರೀದಿಸುವುದನ್ನು ಮುಂದಕ್ಕೆ ಹಾಕಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |