ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ 'ಯಾಹೂ' ಅಂತರ್ಜಾಲ ಸಂಸ್ಥೆಯನ್ನು ಖರೀದಿಸುವುದನ್ನು ತಳ್ಳಿಹಾಕಿದ 'ಮೈಕ್ರೋಸಾಫ್ಟ್' ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಬಲ್‌ಮರ್, ಸರ್ಚ್‌ಗೆ ಸಂಬಂಧಿಸಿದ ಉತ್ಪನ್ನಗಳಲ್ಲಿ ಪಾಲುದಾರಿಕೆಯನ್ನು ಹೊಂದುವ ಆಸಕ್ತಿಯಿದೆ ಎಂದು ತಿಳಿಸಿದ್ದಾರೆ.
'ಯಾಹೂ' ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆರ್ರಿ ಯಾಂಗ್ ಅವರನ್ನು ಹುದ್ದೆಯಿಂದ ಬದಲಿಸಲಾಗುವುದು ಎಂದು ಅಡಳಿತ ಮಂಡಳಿ ಘೋಷಿಸಿದ ನಂತರ ಕರೆಯಲಾಗಿದ್ದ ಮೈಕ್ರೋಸಾಫ್ಟ್ ಶೇರುದಾರರ ಸಭೆಯಲ್ಲಿ ಸಿಇಒ ಬಲ್ಲಮರ್ಸ್ ತಿಳಿಸಿದರು.
'ಯಾಹೂ' ಕಂಪೆನಿಯ ಪ್ರಸ್ತುತ ದರಕ್ಕಿಂತ ಮೂರು ಪಟ್ಟು (47.5 ಬಿಲಿಯನ್ ಡಾಲರ್) ಹೆಚ್ಚು ದರ ನೀಡಲು ಮೈಕ್ರೋಸಾಫ್ಟ್ ಸಿದ್ದವಿದ್ದರೂ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಜೆರ್ರಿ ಯಂಗ್ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯಾಂಗ್ ಅವರು ಸಿಇಒ ಹುದ್ದೆಯಿಂದ ನಿರ್ಗಮಿಸುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್‌ಗೆ 'ಯಾಹೂ' ಖರೀದಿಸುವ ಅವಕಾಶಗಳು ಹೆಚ್ಚಾಗಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಮೈಕ್ರೋಸಾಫ್ಟ್ ಮುಖ್ಯಸ್ಥರು 'ಯಾಹೂ'ನೊಂದಿಗೆ ಪಾಲುದಾರಿಕೆಗೆ ಸಿದ್ದ ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಶೇರುಪೇಟೆಯಲ್ಲಿ ಶೇ.20 ರಷ್ಟು ಶೇರುದರಗಳಲ್ಲಿ ಏರಿಕೆಯಾಗಿವೆ
'ಯಾಹೂ' ಸಂಸ್ಥೆಯೊಂದಿಗೆ ಅಂತರ್ಜಾಲ ಸರ್ಚ್ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ಪಾಲುದಾರಿಕೆಯನ್ನು ಹೊಂದುವುದರಿಂದ ಅಮೆರಿಕದಲ್ಲಿ ಆನ್‌ಲೈನ್ ಜಾಹೀರಾತು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಬಲ್‌ಮರ್ ತಿಳಿಸಿದ್ದಾರೆ. |