ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ ದರಗಳಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ ದರಗಳಲ್ಲಿ ಕುಸಿತ
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಶೇರುಪೇಟೆಗಳು ಕುಸಿತಗೊಂಡಿದ್ದರಿಂದ, ಇಂಧನ ಬೇಡಿಕೆಯಲ್ಲಿ ಕುಸಿತವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಎರಡು ವರ್ಷಗಳಷ್ಟು ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 53 ಡಾಲರ್‌ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಕಚ್ಚಾ ತೈಲ ಡಿಸೆಂಬರ್ ವಿತರಣೆ ದರ 81 ಸೆಂಟ್‌ಗಳ ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 52.81 ಡಾಲರ್‌ ತಲುಪಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕ ಕುಸಿತ ಹೀನಾಯ ಸ್ಥಿತಿಗೆ ತಲುಪಿದೆ ಎನ್ನುವುದು ನಾಗರಿಕರ ಅಭಿಪ್ರಾಯವಾಗಿದೆ ಎಂದು ಸಿಡ್ನಿಯ ಆರ್ಥಿಕ ತಜ್ಞರಾದ ಟಾಬಿ ಹಾಸಲ್‌ ಹೇಳಿದ್ದಾರೆ.

ಡೊ ಜೊನ್ಸ್ ಕೈಗಾರಿಕೆ ಶೇರುಗಳು ಶೇ. 5.1 ರಷ್ಟು ಕುಸಿತ ಕಂಡ ಹಿನ್ನೆಲೆಯಲ್ಲಿ ಅಮೆರಿಕದ ಕಾರು ತಯಾರಿಕೆ ಸಂಸ್ಥೆಯಾದ ಜನರಲ್ ಮೋಟಾರ್ಸ್‌ ಕಂಪೆನಿಗೆ ಅಮೆರಿಕ ಸಂಸತ್ತು 25 ಬಿಲಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತದಿಂದ ಉದ್ಯೋಗಿಗಳಿಗೆ ತೊಂದರೆಯಿಲ್ಲ
'ಯಾಹೂ' ಖರೀದಿಯಿಲ್ಲ ಪಾಲುದಾರಿಕೆ ಮಾತ್ರ:: ಮೈಕ್ರೋಸಾಫ್ಟ್‌
ಮಾರುತಿಯಿಂದ 'ಎ ಸ್ಟಾರ್' ಮಾಡೆಲ್‌ ಕಾರು ಬಿಡುಗಡೆ
ಕುಸಿದ ಕ್ಷೇತ್ರಗಳಿಗೆ ವಿಶೇಷ ಆದ್ಯತೆ: ಚಿದಂಬರಂ
'ಯಾಂಗ್' ನಿರ್ಗಮನದಿಂದ ಶೇರುದರಗಳಲ್ಲಿ ಏರಿಕೆ
ದರ ಕಡಿತ: ಚಿದಂಬರಂ ಮನವಿಗೆ ಉದ್ಯಮಿಗಳ ನಕಾರ