ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೈಕ್ರೋಸಾಫ್ಟ್‌ನಿಂದ ಉಚಿತ ಆಂಟಿವೈರಸ್ ತಂತ್ರಾಂಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಕ್ರೋಸಾಫ್ಟ್‌ನಿಂದ ಉಚಿತ ಆಂಟಿವೈರಸ್ ತಂತ್ರಾಂಶ
ಪಿಸಿ ಸೆಕ್ಯುರಿಟಿ ಸೇವೆಗಳ ಚಂದಾದಾರಿಕೆಯನ್ನು ರದ್ದುಗೊಳಿಸಲು ನಿರ್ಧರಿಸಿರುವ ಕಂಪ್ಯೂಟರ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್, ಗ್ರಾಹಕರು ತಮ್ಮ ಕಂಪ್ಯೂಟರುಗಳನ್ನು ವೈರಸ್, ಸ್ಪೈವೇರ್ ಮತ್ತಿತರ ಸುರಕ್ಷತಾ ಬೆದರಿಕೆಗಳಿಂದ ರಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ತಂತ್ರಾಂಶಗಳನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.

ಈ ಕ್ರಮದ ಮೂಲಕ ಅದು ಪಿಸಿ ಸೆಕ್ಯುರಿಟಿ ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧಿಗಳಾದ ಮೆಕಾಫೀ ಇಂಕ್ ಮತ್ತು ಸೈಮನ್‌ಟೆಕ್ ಕಾರ್ಪೊರೇಶನ್‌ಗೆ ಸೆಡ್ಡು ಹೊಡೆಯಲು ನಿರ್ಧರಿಸಿದೆ.

ಮುಂದಿನ ಜೂನ್ 30ರಂದು ಮೈಕ್ರೋಸಾಫ್ಟ್ ತನ್ನ "ವಿಂಡೋಸ್ ಲೈವ್ ಒನ್‌ಕೇರ್" ಸೇವೆಯ ಮಾರಾಟವನ್ನು ಸ್ಥಗಿತಗೊಳಿಸಲಿದೆ. ಮೂರು ಕಂಪ್ಯೂಟರುಗಳಿಗೆ ರಕ್ಷಣೆ ನೀಡಬಲ್ಲ ಈ ಸೇವೆಯ ವಾರ್ಷಿಕ ಚಂದಾ ದರವು 49.95 ಡಾಲರ್ ಆಗಿತ್ತು. ಕಂಪನಿಯು 'ಮೋರೋ' ಎಂದು ನಾಮಕರಣ ಮಾಡಿರುವ ಹೊಸ ಸೆಕ್ಯುರಿಟಿ ಪ್ರೋಗ್ರಾಂ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ.

ಆದರೆ, ಮೈಕ್ರೋಸಾಫ್ಟ್‌ನ ಈ ಕ್ರಮವನ್ನು "ಶರಣಾಗತಿ" ಎಂದು ಬಣ್ಣಿಸಿದೆ ಖ್ಯಾತ ಕಂಪ್ಯೂಟರ್ ಸುರಕ್ಷತಾ ಸಾಫ್ಟ್‌ವೇರ್ ಕಂಪನಿಯಾಗಿರುವ ಮೆಕಾಫೀ. ಎರಡು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದರೂ ಒನ್‌ಕೇರ್ ಸಾಫ್ಟ್‌ವೇರ್ ಶೇ.2ಕ್ಕಿಂತಲೂ ಕಡಿಮೆ ಪಾಲು ಹೊಂದಲು ಮಾತ್ರ ಸಮರ್ಥವಾಗಿದೆ ಎಂದಿರುವ ಮೆಕಾಫೀ ವಕ್ತಾರರು, ಮೈಕ್ರೋಸಾಫ್ಟ್ ಕೈಸೋತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್ ಇದೀಗ ಕಡಿಮೆ ಸೌಕರ್ಯಗಳುಳ್ಳ ಉಚಿತ ಮಾದರಿಯನ್ನು ಮಾರುಕಟ್ಟೆಗೆ ಇಳಿಸಲಿದ್ದು, ಇದು ಗ್ರಾಹಕ ಕಂಪ್ಯೂಟರ್ ರಕ್ಷಣೆಯ ಅವಶ್ಯಕತೆಯನ್ನು ಪೂರೈಸಲಾರದು ಎಂದೂ ಅವರು ಹೇಳಿದ್ದಾರೆ.

ಮೆಕಾಫೀ ಮತ್ತು ಸೈಮನ್‌ಟೆಕ್ ಕಂಪನಿಗಳು ಹಾಗೂ ಮೈಕ್ರೋಸಾಫ್ಟ್ ನಡುವೆ ಹಲವು ಸಮಯದಿಂದ ತಿಕ್ಕಾಟ ನಡೆಯುತ್ತಿದ್ದು, ವಿಂಡೋಸ್ ವಿಸ್ತಾ ಆಪರೇಟಿಂಗ್ ಸಿಸ್ಟಂನ ಪ್ರಧಾನ ಭಾಗಕ್ಕೆ ಬೇರಾವುದೇ ಆಂಟಿವೈರಸ್ ಸಾಫ್ಟ್‌ವೇರ್‌ಗಳಿಗೆ ಪ್ರವೇಶ ಇಲ್ಲದಂತೆ ಮೈಕ್ರೋಸಾಫ್ಟ್ ಕಂಪನಿಯು ರೂಪಿಸಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರಿಗೆ ರೂಪಾಯಿ ದಾಖಲೆಯ ಕುಸಿತದತ್ತ
ಕಚ್ಚಾ ತೈಲ ದರಗಳಲ್ಲಿ ಕುಸಿತ
ಆರ್ಥಿಕ ಕುಸಿತದಿಂದ ಉದ್ಯೋಗಿಗಳಿಗೆ ತೊಂದರೆಯಿಲ್ಲ
'ಯಾಹೂ' ಖರೀದಿಯಿಲ್ಲ ಪಾಲುದಾರಿಕೆ ಮಾತ್ರ:: ಮೈಕ್ರೋಸಾಫ್ಟ್‌
ಮಾರುತಿಯಿಂದ 'ಎ ಸ್ಟಾರ್' ಮಾಡೆಲ್‌ ಕಾರು ಬಿಡುಗಡೆ
ಕುಸಿದ ಕ್ಷೇತ್ರಗಳಿಗೆ ವಿಶೇಷ ಆದ್ಯತೆ: ಚಿದಂಬರಂ