ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ದರ ಶೇ.8.9ಕ್ಕೆ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ದರ ಶೇ.8.9ಕ್ಕೆ ಕುಸಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಿಯ ಇಂಧನ ಉತ್ಪನ್ನಗಳ ದರಗಳು ಕುಸಿತಗೊಂಡ ಹಿನ್ನೆಲೆಯಲ್ಲಿ ಹಣದುಬ್ಬರ ದರ ಶೇ.8.9 ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 1 ಕ್ಕೆ ಶೇ.8.98 ರಷ್ಟಿದ್ದ ಹಣದುಬ್ಬರ ದರ, ನವೆಂಬರ್ 8 ಕ್ಕೆ ವಾರಂತ್ಯಗೊಂಡಂತೆ ಶೇ.0.08 ರಷ್ಟು ಇಳಿಕೆಯಾಗಿ ಶೇ.8.9ಕ್ಕೆ ತಲುಪಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಪ್ರಕಟಿಸಿದ್ದಾರೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಹಣದುಬ್ಬರ ದರ ಎರಡಂಕಿಗೆ ಏರಿಕೆಯನ್ನು ಕಂಡಿತ್ತು. ಮೇ 31ಕ್ಕೆ ಅಂತ್ಯಗೊಂಡಂತೆ ಶೇ.9.32ರಷ್ಟಿದ್ದ ಹಣದುಬ್ಬರ ದರ 21 ವಾರಗಳ ನಂತರ ಶೇ.8.9ಕ್ಕೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಂತ್ಯಗೊಂಡಂತೆ ಡಿಸೈಲ್ ದರದಲ್ಲಿ ಶೇ.11 ರಷ್ಟು ಇಳಿಕೆಯಾಗಿದ್ದು, ಸೀಮೆ ಎಣ್ಣೆ ಹಾಗೂ ಜೆಟ್ ಇಂಧನ ದರಗಳಲ್ಲಿ ಕ್ರಮವಾಗಿ ಶೇ.9 ರಷ್ಟು ಹಾಗೂ ಶೇ. 5 ರಷ್ಟು ಇಳಿಕೆಯನ್ನು ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳಿದ್ದ ದರ, ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 53 ಡಾಲರ್‌‌ಗಳಿಗೆ ಇಳಿಕೆಯಾಗಿದೆ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈಕ್ರೋಸಾಫ್ಟ್‌ನಿಂದ ಉಚಿತ ಆಂಟಿವೈರಸ್ ತಂತ್ರಾಂಶ
ಡಾಲರ್ ಎದುರಿಗೆ ರೂಪಾಯಿ ದಾಖಲೆಯ ಕುಸಿತದತ್ತ
ಕಚ್ಚಾ ತೈಲ ದರಗಳಲ್ಲಿ ಕುಸಿತ
ಆರ್ಥಿಕ ಕುಸಿತದಿಂದ ಉದ್ಯೋಗಿಗಳಿಗೆ ತೊಂದರೆಯಿಲ್ಲ
'ಯಾಹೂ' ಖರೀದಿಯಿಲ್ಲ ಪಾಲುದಾರಿಕೆ ಮಾತ್ರ:: ಮೈಕ್ರೋಸಾಫ್ಟ್‌
ಮಾರುತಿಯಿಂದ 'ಎ ಸ್ಟಾರ್' ಮಾಡೆಲ್‌ ಕಾರು ಬಿಡುಗಡೆ