ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ತೈಲ ಬೇಡಿಕೆ ಕುಂಠಿತವಾಗಿದ್ದು, ಜುಲೈ ತಿಂಗಳಿಗೆ ಹೋಲಿಸಿದಲ್ಲಿ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದರ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 49 ಡಾಲರ್‌ಗೆ ತಲುಪಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಅಮೆರಿಕದ ಶೇರುಪೇಟೆಯ ಶೇರುಸೂಚ್ಯಂಕ ಕಳೆದ ಹತ್ತು ವರ್ಷಗಳಷ್ಟು ಇಳಿಕೆ ಕಂಡಿರುವುದರಿಂದ ಏಷ್ಯಾ ಶೇರು ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಸುಮಾರು ಐದು ವರ್ಷಗಳಷ್ಟು ಇಳಿಕೆ ಕಂಡಿದೆ.
ಕಚ್ಚಾ ತೈಲ ಜನೆವರಿ ತಿಂಗಳ ವಿತರಣೆಯಲ್ಲಿ ಪ್ರತಿ ಬ್ಯಾರೆಲ್‌ಗೆ 48.40 ಡಾಲರ್‌ಗಳಿಗೆ ಇಳಿಕೆಯಾಗಿದ್ದು. ಸತತ ಏಳು ದಿನಗಳಲ್ಲಿ ಶೇ 14 ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಕುಸಿತದಿಂದಾಗಿ ಪ್ರತಿಯೊಂದನ್ನು ಆಳವಾದ ಪ್ರಪಾತಕ್ಕೆ ತಳ್ಳುತ್ತಿದೆ ಎಂದು ಟೋಕಿಯೊ ಮೂಲದ ಮಿತುಬುಷಿ ಕಾರ್ಪೋರೇಶನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಂಥೋನಿ ನುನಾನ್ ಅಭಿಪ್ರಾಯಪಟ್ಟಿದ್ದಾರೆ. |