ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೃಹ ಖರೀದಿ ದರಗಳಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಖರೀದಿ ದರಗಳಲ್ಲಿ ಕುಸಿತ
ಫ್ಲ್ಯಾಟ್‌ಗಳನ್ನು ನಿಮ್ಮದೇ ಆದ ಬಜೆಟ್ ವ್ಯಾಪ್ತಿಯೊಳಗೆ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲಿ ಈಡೇರುವ ಅವಕಾಶಗಳು ಒದಗಿ ಬರುತ್ತಿವೆ.ರಿಯಲ್ ಎಸ್ಟೇಟ್ ಉದ್ಯಮಿದಾರರು ಶೇ.5 ರಿಂದ ಶೇ.10 ರಷ್ಟು ದರಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ.

ದರಗಳು ಇಳಿಕೆಯಾದ ಕೂಡಲೇ ಫ್ಲ್ಯಾಟ್‌ಗಳನ್ನು ಖರೀದಿಸಬೇಕು ಎನ್ನುವ ನಿರೀಕ್ಷೆಯಲ್ಲಿರುವ ಗ್ರಾಹಕರಿಗೆ, ಮಾರುಕಟ್ಟೆಗೆ ಅನುಗುಣವಾಗಿ ಗೃಹ ಖರೀದಿಯಲ್ಲಿ ದರ ಕಡಿತ ಘೋಷಿಸುವುದರಿಂದ ವಹಿವಾಟಿನಲ್ಲಿ ಏರಿಕೆಯಾಗಬಹುದು ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಗ್ರಾಹಕರು ರಿಯಲ್ ಎಸ್ಟೇಟ್ ದರಗಳು ಕುಸಿದ ನಂತರ ಫ್ಲ್ಯಾಟ್‌ಗಳನ್ನು ಖರೀದಿಸುವ ಆಲೋಚನೆಯಲ್ಲಿದ್ದಾರೆ. ಆದ್ದರಿಂದ ಗ್ರಾಹಕರ ಬೇಡಿಕೆಗಳಿಗೆ ಸ್ಪಂದಿಸಿ ಮನೆಗಳನ್ನು ಖರೀದಿಸಲು ಅನುವಾಗುವಂತೆ ದರಗಳಲ್ಲಿ ಇಳಿಕೆ ಮಾಡಲಾಗಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಅಧ್ಯಕ್ಷ ರೋಹಟಾಸ್ ಗೋಯಲ್ ಹೇಳಿದ್ದಾರೆ.

ಪೂಣೆ ಮೂಲದ ಜೆರಾ ಪ್ರಾಪರ್ಟಿಸ್ ಸಂಸ್ಥೆ 3500 ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆದಷ್ಟು ಹೆಚ್ಚಿನ ದರಗಳನ್ನು ಕಡಿತ ಮಾಡಿ ಗ್ರಾಹಕರ ಬಜೆಟ್‌ಗೆ ಸುಲಭವಾಗುವಂತೆ ಗೃಹಗಳನ್ನು ಖರೀದಿಸಲು ಅವಕಾಶ ನೀಡಬೇಕು ಎಂದು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಘದ ಅಧ್ಯಕ್ಷ ಕುಮಾರ್ ಜೆರಮ್ ಸಲಹೆ ನೀಡಿದ್ದಾರೆ.

ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ದರಗಳನ್ನು ಇಳಿಕೆ ಮಾಡುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಗೃಹ ಖರೀದಿ ದರಗಳ ಕಡಿತವನ್ನು ಘೋಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ದರ : ಪ್ರತಿ ಬ್ಯಾರೆಲ್‌ಗೆ 49 ಡಾಲರ್‌
ಅಡ್ವಾಣಿ ನಿವಾಸದಲ್ಲಿ ಅಂಬಾನಿ ಸಹೋದರರ ಹಸ್ತಲಾಘವ
ಪರಿಷ್ಕೃತ ವೇತನಕ್ಕೆ ಸಚಿವ ಸಂಪುಟ ಅನುಮೋದನೆ
ಹಣದುಬ್ಬರ ದರ ಶೇ.8.9ಕ್ಕೆ ಕುಸಿತ
ಮೈಕ್ರೋಸಾಫ್ಟ್‌ನಿಂದ ಉಚಿತ ಆಂಟಿವೈರಸ್ ತಂತ್ರಾಂಶ
ಡಾಲರ್ ಎದುರಿಗೆ ರೂಪಾಯಿ ದಾಖಲೆಯ ಕುಸಿತದತ್ತ