ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ
ದೂರದರ್ಶಿತ್ವದ ಆರ್ಥಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಕಾರಾತ್ಮಕ ದೃಷ್ಟಿಕೋನದಿಂದ ವೊಕ್ಸ್‌ವಾಗೆನ್ ಹೂಡಿಕೆ ಯೋಜನೆಗಳೊಂದಿಗೆ ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಿದೆ.

ವೊಕ್ಸ್‌ವಾಗನ್ ಕಂಪೆನಿಯ ಭಾರತದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೊರ್ಗ್ ಮೌಲ್ಲೆರ್ ಮಾತನಾಡಿ ಭಾರತದಲ್ಲಿ ಉತ್ತಮ ಅನುಭವವಾಗಿದ್ದು, ಸಕಾರಾತ್ಮಕ ಬೆಳವಣಿಗೆಗಳನ್ನು ಕಾಣಬಹುದಾಗಿದೆ. 'ತಂತ್ರಜ್ಞಾನ ಮತ್ತು ಉತ್ಪಾದನೆಯ ಸವಾಲುಗಳು' ಕುರಿತು ಮಾತನಾಡಿದ ಅವರು ಭಾರತದ ಆರ್ಥಿಕತೆ ಮಧ್ಯಂತರದ ಅವಧಿಯಲ್ಲಿ ಮರಳಿ ಸುಸ್ಥಿತಿಗೆ ಬರಲಿದ್ದು ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಹೇಳಿದ್ದಾರೆ.

ವರ್ಲ್ಡ್‌ ಎಕಾನಾಮಿಕ್ ಫೋರಂ ಇನ್ ಕೋ-ಅಪರೇಶನ್ ಮತ್ತು ಕೌನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿಗಳ ಜಂಟಿ ಆಶ್ರಯದಲ್ಲಿ ನವದೆಹಲಿಯಲ್ಲಿ ನವೆಂಬರ್ 16 ರಿಂದ 18 ರವರೆಗೆ ಶೃಂಗಸಭೆ ಆಯೋಜಿಸಲಾಗಿತ್ತು.

ಜಾಗತಿಕ ಆರ್ಥಿಕ ಕುಸಿತದಿಂದ ಭಾರತದ ಅಟೋಮೊಬೈಲ್ ಮಾರುಕಟ್ಟೆಯ ಬೇಡಿಕೆಯಲ್ಲಿ ಕುಸಿತವಾಗಿದ್ದು, ಮಧ್ಯಮ ಅವಧಿಯ ಹಾಗೂ ದೂರದ ಅವಧಿಯ ಬಗ್ಗೆ ನಾವು ಚಿಂತಿತರಾಗಿಲ್ಲ. ಆರ್ಥಿಕ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಮ್ಮ ಹೂಡಿಕೆ ಯೋಜನೆಗಳಿಗೆ ಬದ್ದರಾಗಿದ್ದೇವೆ ಎಂದು ಮೌಲ್ಲೆರ್ ಹೇಳಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ವೊಕ್ಸ್‌ವಾಗನ್ ಗ್ರೂಪ್ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.2007ರಲ್ಲಿ ಮೊದಲ ಹತ್ತು ತಿಂಗಳಲ್ಲಿ ಮಾರಾಟ ಮಾಡಿದ ಕಾರುಗಳಿಗಿಂತ ಪ್ರಸಕ್ತ ವರ್ಷದಲ್ಲಿ ಜನೆವರಿಯಿಂದ ಅಕ್ಟೋಬರ್ ತಿಂಗಳವರೆಗೆ ಶೇ.66 ರಷ್ಟು ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಸಿದ್ದಾರೆ.

ಭಾರತದ ಅಟೋಮೊಬೈಲ್ ಮಾರುಕಟ್ಟೆ ಹಲವು ಕಾರಣಗಳಿಂದ ಸಕರಾತ್ಮಕವಾಗಿದೆ. ಪ್ರಸ್ತುತ ಪ್ರಯಾಣಿಕ ಕಾರುಗಳ ಸಾಂದ್ರತೆ ತುಂಬಾ ಕಡಿಮೆಯಾಗಿದೆ. ಮಧ್ಯಮ ವರ್ಗದ ಜನರಲ್ಲಿ ಆದಾಯದಲ್ಲಿ ಹೆಚ್ಚಳವಾಗಿದ್ದು, ಕಾರುಗಳ ಖರೀದಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.2009ರ ಆರಂಭಿಕ ಆರು ತಿಂಗಳಲ್ಲಿ ಚಾಕನ್‌ ಘಟಕದಿಂದ ವೊಕ್ಸವಾಗನ್ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಮೌಲ್ಲರ್ ಹೇಳಿದ್ದಾರೆ.

ವೊಕ್ಸ್‌ವಾಗನ್ ಕಂಪೆನಿ ಪುಣೆಯ ಚಾಕನ್ ಬಳಿ 3600 ಕೋಟಿ.ವೆಚ್ಚದಲ್ಲಿ ,ವಾರ್ಷಿಕವಾಗಿ 1.1 ಲಕ್ಷ ಕಾರುಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸಿದ್ದು, ಮುಂಬರುವ 2009ರಲ್ಲಿ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಪುಣೆಯ ಚಾಕನ್ ಘಟಕದಿಂದ ನೂತನ ಮಾಡೆಲ್‌ಗಳ ಕಾರುಗಳನ್ನು ಮುಂಬರುವ 2009ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುಸಿದ ಬೇಡಿಕೆ: ಹೊಂಡಾ ಉತ್ಪಾದನೆಯಲ್ಲಿ ಕಡಿತ
ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಾಮರ್ಥ್ಯವಿದೆ: ಪ್ರಧಾನಿ
ಗೃಹ ಖರೀದಿ ದರಗಳಲ್ಲಿ ಕುಸಿತ
ತೈಲ ದರ : ಪ್ರತಿ ಬ್ಯಾರೆಲ್‌ಗೆ 49 ಡಾಲರ್‌
ಅಡ್ವಾಣಿ ನಿವಾಸದಲ್ಲಿ ಅಂಬಾನಿ ಸಹೋದರರ ಹಸ್ತಲಾಘವ
ಪರಿಷ್ಕೃತ ವೇತನಕ್ಕೆ ಸಚಿವ ಸಂಪುಟ ಅನುಮೋದನೆ