ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಉದಾರೀಕರಣ ನೀತಿಯನ್ನು ದೇಶದಲ್ಲಿ ಜಾರಿಗೆ ತರುವುದು ಅಗತ್ಯವಾಗಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಹಿಂದೂಸ್ತಾನ್ ಟೈಮ್ಲ್ ಲೀಡರ್‌ಶಿಪ್ ಆಯೋಜಿಸಿದ ಶೃಂಗಸಭೆಯಲ್ಲಿ ಮಾತನಾಡಿದ ಸೋನಿಯಾ, 1960ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್‌ಗಳ ರಾಷ್ಟ್ರೀಕರಣಗೊಳಿಸಲು ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ ಸೋನಿಯಾ, ಇದರಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಗಂಭೀರ ಸ್ಥಿತಿಯಲ್ಲಿ ಕೂಡಾ ನಮ್ಮ ಬ್ಯಾಂಕ್‌ಗಳು ಸುರಕ್ಷಿತವಾಗಿ ನಿಯಂತ್ರಣದಲ್ಲಿವೆ ಎಂದು ನುಡಿದರು.

ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿರುವುದು ಸೂಕ್ತ ನಿರ್ಧಾರ ಎನ್ನುವುದಕ್ಕೆ ಪ್ರತಿದಿನದ ಆರ್ಥಿಕ ಬೆಳವಣಿಗೆಗಳು ಸಾಕ್ಷಿಯಾಗಿವೆ.ನಾವು ಎದುರಾಗಿರುವ ಜಾಗತಿಕ ಆರ್ಥಿಕ ಚೆಂಡುಮಾರುತವನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ತಿಳಿಸಿದ್ದಾರೆ.

ದೇಶದ ಜನತೆ ಆರ್ಥಿಕ ಕುಸಿತ ಕುರಿತಂತೆ ಆತಂಕಪಡುವ ಅಗತ್ಯವಿಲ್ಲ. ಮುಂಬರುವ ದಿನಗಳಲ್ಲಿ ಆರ್ಥಿಕ ಸ್ಥಿತಿ ಸಾಮಾನ್ಯ ಹಂತಕ್ಕೆ ಮರಳಲಿದೆ ಎಂದು ಸೋನಿಯಾ ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ
ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ
ಕುಸಿದ ಬೇಡಿಕೆ: ಹೊಂಡಾ ಉತ್ಪಾದನೆಯಲ್ಲಿ ಕಡಿತ
ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಾಮರ್ಥ್ಯವಿದೆ: ಪ್ರಧಾನಿ
ಗೃಹ ಖರೀದಿ ದರಗಳಲ್ಲಿ ಕುಸಿತ
ತೈಲ ದರ : ಪ್ರತಿ ಬ್ಯಾರೆಲ್‌ಗೆ 49 ಡಾಲರ್‌