ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಸಂಕಷ್ಟದಲ್ಲಿರುವ ಜವಳಿ ಉದ್ಯಮ, ರಫ್ತು ವಹಿವಾಟಿನಲ್ಲಿ ಭಾರಿ ಕುಸಿತವಾಗಿದ್ದರಿಂದ ಮುಂದಿನ ಐದು ತಿಂಗಳಲ್ಲಿ 5 ಲಕ್ಷ ನೌಕರರು ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಜಿ.ಕೆ ಪಿಳ್ಳೈ ಹೇಳಿದ್ದಾರೆ.

ಜವಳಿ ಸಚಿವಾಲಯದ ಅಂದಾಜಿನ ಪ್ರಕಾರ, ಮುಂಬರು ಐದು ತಿಂಗಳಲ್ಲಿ ಐದು ಲಕ್ಷ ಮಂದಿ ಹುದ್ದೆಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ಪಿಳ್ಳೈ ಚೇಂಬರ್ ಆಫ್‌ ಕಾಮರ್ಸ್ ಆಯೋಜಿಸಿದ ಸಭೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಫ್ತುವಹಿವಾಟು ಕುಸಿತದಿಂದ ಕಂಗಾಲಾದ ಜವಳಿ ಉದ್ಯಮಕ್ಕೆ ಪುನಶ್ಚೇತನ ನೀಡಲು , ಬಡ್ಡಿ ದರ ಕಡಿತ, ರಫ್ತು ವಹಿವಾಟು ಸಂಸ್ಥೆಗಳಿಗೆ ಹೆಚ್ಚಿನ ಸಾಲ ನೀಡುವಂತಹ ಪ್ಯಾಕೇಜ್‌‌ ಕುರಿತಂತೆ ಪ್ರಧಾನಿ ಮನಮೋಹನ್ ಸಿಂಗ್ ಮುಂದಿನ ವಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

2008-09ರ ಆರಂಭಿಕ ಮೊದಲ ಆರು ತಿಂಗಳಲ್ಲಿ ರಫ್ತುವಹಿವಾಟು ಶೇ.30ರಷ್ಟಿದ್ದು, ನಂತರದ ಅವಧಿಯಲ್ಲಿ ಶೇ.10ಕ್ಕೆ ಕುಸಿಯುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಫ್ತು ವಹಿವಾಟು ಮತ್ತಷ್ಟು ಕುಸಿತವಾದಲ್ಲಿ 200 ಬಿಲಿಯನ್ ಡಾಲರ್ ವಾರ್ಷಿಕ ಗುರಿಯನ್ನು ತಲುಪುವ ಸಾಧ್ಯತೆಗಳು ವಿಫಲವಾಗಲಿವೆ ಎಂದು ವಾಣಿಜ್ಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ
ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ
ಕುಸಿದ ಬೇಡಿಕೆ: ಹೊಂಡಾ ಉತ್ಪಾದನೆಯಲ್ಲಿ ಕಡಿತ
ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವ ಸಾಮರ್ಥ್ಯವಿದೆ: ಪ್ರಧಾನಿ
ಗೃಹ ಖರೀದಿ ದರಗಳಲ್ಲಿ ಕುಸಿತ