ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ
ಪ್ರಸ್ತುತ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಜಗತ್ತಿಗೆ ಸವಾಲಾಗಿ ಆರ್ಥಿಕ ಪರಿಸ್ಥಿತಿ ತುಂಬಾ ಕಠೋರವಾಗಿದೆ ಎಂದು ಚೀನಾದ ಅಧ್ಯಕ್ಷ ಹು ಜಿಂಟಾವೊ ಅಪೆಕ್ ಸಭೆ ಮುಂದಿರುವಂತೆ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕೆಲ ರಾಷ್ಟ್ರಗಳಲ್ಲಿದ್ದ ಆರ್ಥಿಕ ಬಿಕ್ಕಟ್ಟು ಜಗತ್ತಿಗೆ ವಿಸ್ತರಿಸಿದ್ದು, ಉದಯೋನ್ಮುಖ ರಾಷ್ಟ್ರಗಳಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳವರೆಗೆ ,ಹಣಕಾಸು ಕ್ಷೇತ್ರಗಳಿಂದ ಆರ್ಥಿಕತೆಯವರೆಗೆ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರಗಳ ಪರಸ್ಪರ ಸಹಕಾರ ಹಾಗೂ ಸ್ಥಿರತೆಯನ್ನು ಕಾಪಾಡಿದಲ್ಲಿ ಮಾತ್ರ ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷ ಹು ಜಿಂಟಾವೊ ಏಷ್ಯಾ ಫೆಸಿಫಿಕ್ ಎಕಾನಾಮಿಕ್ ಕೋ-ಅಪರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಶೃಂಗಸಭೆಯಲ್ಲಿ ಅಭಿಪ್ರಾಯಪಟ್ಟರು.

ವ್ಯಾಪಾರ ಮತ್ತು ಹೂಡಿಕೆಯ ಉದಾರೀಕರಣ ಮತ್ತು ಸರಳ ಮಾರ್ಗಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಚೀನಾ ಆರ್ಥಿಕ ನೀತಿಗಳಲ್ಲಿ ಮಾಡಿದ ಬದಲಾವಣೆಗಳಿಂದಾಗಿ ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿ 30 ವರ್ಷಗಳ ವರ್ಷಾಚರಣೆಗೆ ಸಿದ್ದವಾಗಿದೆ ಎಂದು ಹು ಜಿಂಟಾವೊ ಚೀನಾ ಆರ್ಥಿಕ ನೀತಿಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2008-09ರಲ್ಲಿ ಆರ್ಥಿಕಸ್ಥಿತಿ ಸದೃಢ; ವಿತ್ತ ಸಚಿವಾಲಯ
5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?
ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ
ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ
ಕುಸಿದ ಬೇಡಿಕೆ: ಹೊಂಡಾ ಉತ್ಪಾದನೆಯಲ್ಲಿ ಕಡಿತ