ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 10 ಕಂಪೆನಿಗಳಿಗೆ ವಾರದಲ್ಲಿ 30 ಸಾ.ಕೋಟಿ ನಷ್ಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
10 ಕಂಪೆನಿಗಳಿಗೆ ವಾರದಲ್ಲಿ 30 ಸಾ.ಕೋಟಿ ನಷ್ಟ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ನಾಲ್ಕು ಕಂಪೆನಿಗಳು ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರಲು ಸಾಧ್ಯವಾಗಿದ್ದರೂ ದೇಶದ 10 ಪ್ರಮುಖ ಕಂಪೆನಿಗಳು ವಾರದ ಅವಧಿಯಲ್ಲಿ 30 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ದೇಶದ ಪ್ರಮುಖ ಹತ್ತು ಕಂಪೆನಿಗಳಲ್ಲಿ 6 ಕಂಪೆನಿಗಳು ಸಾರ್ವಜನಿಕ ಕ್ಷೇತ್ರದ ಕಂಪೆನಿಗಳಾಗಿದ್ದು,ನಾಲ್ಕು ಖಾಸಗಿ ಕ್ಷೇತ್ರದ ಕಂಪೆನಿಗಳಾಗಿವೆ. ಉಭಯ ಕ್ಷೇತ್ರದ ಕಂಪೆನಿಗಳು ನವೆಂಬರ್ 21ಕ್ಕೆ ವಾರಂತ್ಯಗೊಂಡಂತೆ 30,474 ಕೋಟಿ ರೂ.ಗಳ ನಷ್ಟವನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರದ ವಹಿವಾಟಿನಲ್ಲಿ ದೇಶದ ಹತ್ತು ಪ್ರಮುಖ ಕಂಪೆನಿಗಳ ವಾರದ ಹಿಂದೆ ಇದ್ದ ಒಟ್ಟು ಮೌಲ್ಯ 9,80,727ಕೋಟಿ ರೂ.ಗಳಾಗಿದ್ದು,ಪ್ರಸಕ್ತ ವಾರದಲ್ಲಿ 9,50,253 ಕೋಟಿ ರೂ.ಗಳಾಗಿವೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಸಾರ್ವಜನಿಕ ಸ್ವಾಮ್ಯದ ಎನ್‌ಎಂಡಿಸಿ 11,874 ಕೋಟಿ ರೂ.ಗಳ ಮೌಲ್ಯದ ಇಳಿಕೆಯನ್ನು ಕಂಡಿದೆ.ಎಂಎಂಟಿಸಿ ಕಂಪೆನಿ 8,605 ಕೋಟಿ ರೂ. ನಷ್ಟವನ್ನು ಎದುರಿಸಿದೆ.

ಟೆಲಿಕಾಂ ಕ್ಷೇತ್ರದ ದೈತ್ಯ ಭಾರ್ತಿ ಏರ್‌ಟೆಲ್ 5,890 ಕೋಟಿ ರೂ, ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ 3,336 ಕೋಟಿ ರೂ. ನಷ್ಟವನ್ನು ವಾರದ ಅವಧಿಯಲ್ಲಿ ಅನುಭವಿಸಿವೆ ಎಂದು ವಹಿವಾಚಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ
2008-09ರಲ್ಲಿ ಆರ್ಥಿಕಸ್ಥಿತಿ ಸದೃಢ; ವಿತ್ತ ಸಚಿವಾಲಯ
5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?
ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ
ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 'ವೊಕ್ಸ್‌ವಾಗೆನ್' ಧಮಾಕಾ