ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪ್ರವಾಸೋದ್ಯಮದಲ್ಲಿ ಶೇ 10 ರಷ್ಟು ಇಳಿಕೆ: ಅಸೋಚಾಮ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸೋದ್ಯಮದಲ್ಲಿ ಶೇ 10 ರಷ್ಟು ಇಳಿಕೆ: ಅಸೋಚಾಮ್
ಪ್ರಸಕ್ತ ವರ್ಷ ಭಾರತದ ಪ್ರವಾಸೋದ್ಯಮ ಶೇ 15 ರಷ್ಟು ಗುರಿಯನ್ನು ಹೊಂದಲಾಗಿತ್ತು. ಆದರೆ ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕೇವಲ ಶೇ 5 ರಷ್ಟು ಗುರಿಯನ್ನು ತಲುಪಲು ಸಾಧ್ಯವಾಗಿದೆ ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಪ್ರಕಟಿಸಿದೆ.

2008-09 ರ ಸಾಲಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಶೇ 10 ರಷ್ಟು ಕುಸಿತ ಕಾಣಲಿದ್ದು, ಶೇ 5ರ ಗಡಿಯನ್ನು ತಲುಪಲಿದೆ ಎಂದು ಅಸೋಚಾಮ್ ಹೇಳಿದೆ.

2007-08ರ ಸಾಲಿನಲ್ಲಿ ಅಮೆರಿಕದಿಂದ ಭಾರತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಶೇ 10 ರಿಂದ ಶೇ.15ಕ್ಕೆ ಇಳಿದಿದೆ. ಯುರೋಪ್‌ನಿಂದ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಶೇ 5 ರಷ್ಟು ಇಳಿಕೆಯಾಗಿದೆ ಎಂದು ಚೇಂಬರ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಕುಸಿತ ಎದುರಾಗಿದೆ ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
10 ಕಂಪೆನಿಗಳಿಗೆ ವಾರದಲ್ಲಿ 30 ಸಾ.ಕೋಟಿ ನಷ್ಟ
ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ
2008-09ರಲ್ಲಿ ಆರ್ಥಿಕಸ್ಥಿತಿ ಸದೃಢ; ವಿತ್ತ ಸಚಿವಾಲಯ
5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?
ಇಂದಿರಾ ದೂರದೃಷ್ಟಿ ಆರ್ಥಿಕ ಬಿಕ್ಕಟ್ಟಿನಿಂದ ಉಳಿಸಿದೆ:ಸೋನಿಯಾ
ಜೆಪಿ ಮಾರ್ಗನ್‌ನಿಂದ 3000 ಉದ್ಯೋಗ ಕಡಿತ