ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್
ಭಾರತದಲ್ಲಿ ಮಾಹಿತ ತಂತ್ರಜ್ಞಾನ ಕ್ಷೇತ್ರ ವೇಗವಾಗಿ ಬೆಳೆಯುವ ಹಂತದಲ್ಲಿದ್ದು, ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿಯವರ ತಂತ್ರಜ್ಞಾನ ಸಲಹಾ ಸಮಿತಿಯ ಸದಸ್ಯ ಕಿರಣ್ ಕಾರ್ನಿಕ್ ಹೇಳಿದ್ದಾರೆ.

ಇಂದಿನ ತಂತ್ರಜ್ಞಾನ ಜನಜೀವನ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. ಮುಂಬೈಯಲ್ಲಿದ್ದ ಮಾಲೀಕ ಸಿಂಗಾಪೂರ್‌ದಲ್ಲಿರುವ ಕೆಮಿಕಲ್‌ ಘಟಕವನ್ನು ನಿಯಂತ್ರಿಸುತ್ತಾನೆ. ಇಂತಹ ತಂತ್ರಜ್ಞಾನಗಳಿಂದ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಬಹುದು ಎಂದು ಕಾರ್ನಿಕ್ ಹೇಳಿದ್ದಾರೆ.

ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುವ ಹಂತದಲ್ಲಿದ್ದು, ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಬಿಪಿಒ ಸೇರಿದಂತೆ ಹೊಸ ಹೊಸ ರೀತಿಯ ಕಾರ್ಯಗಳನ್ನು ಅವಿಷ್ಕರಿಸಬೇಕಾಗಿದೆ ಎಂದು ಕಾರ್ನಿಕ್ ಐಐಎಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅಧಿಕಾರ ಸ್ವೀಕಾರದ ನಂತರ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆಡ್ಡಿಗಳು ಎದುರಾಗಲಿವೆ ಎನ್ನುವ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಕಾರ್ನಿಕ್, ಭಾರತದಲ್ಲಿ ಸ್ಪರ್ಧಾತ್ಮಕ ವಹಿವಾಟಿಗೆ ಉತ್ತಮ ಅವಕಾಶಗಳಿವೆ ಎಂದಾದಲ್ಲಿ ಭಾರತದ ಜೊತೆ ಅಮೆರಿಕ ವಹಿವಾಟು ನಡೆಸುತ್ತದೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾನೋಗೆ ಮಾಲಿನ್ಯ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ
ಪ್ರವಾಸೋದ್ಯಮದಲ್ಲಿ ಶೇ 10 ರಷ್ಟು ಇಳಿಕೆ: ಅಸೋಚಾಮ್
10 ಕಂಪೆನಿಗಳಿಗೆ ವಾರದಲ್ಲಿ 30 ಸಾ.ಕೋಟಿ ನಷ್ಟ
ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ
2008-09ರಲ್ಲಿ ಆರ್ಥಿಕಸ್ಥಿತಿ ಸದೃಢ; ವಿತ್ತ ಸಚಿವಾಲಯ
5ಲಕ್ಷ ಜವಳಿ ನೌಕರರ ಹುದ್ದೆಗೆ ಕುತ್ತು ?