ಜಾಗತಿಕ ಆರ್ಥಿಕ ಕುಸಿತ ತಡೆಗೆ ತ್ವರಿತ ಮತ್ತು ದೃಢ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅಮೆರಿಕ, ಚೀನಾ, ಜಪಾನ್ ಸೇರಿದಂತೆ ಏಷ್ಯಾದ 18 ರಾಷ್ಟ್ರಗಳು ವಾಗ್ದಾನ ನೀಡಿವೆ ಎಂದು ಅಪೆಕ್ ಮೂಲಗಳು ತಿಳಿಸಿವೆ.
ಜಾಗತಿಕವಾಗಿ ವಿಸ್ತರಿಸುತ್ತಿರುವ ಆರ್ಥಿಕ ಕುಸಿತ ಅನೇಕ ದೇಶಗಳ ಆರ್ಥಿಕತೆಗೆ ಭಾರಿ ಧಕ್ಕೆಯನ್ನು ತಂದಿದ್ದು, ಇಲ್ಲಿಯವರೆಗೆ ಎಂದು ಕಂಡರಿಯದ ಆರ್ಥಿಕ ಸವಾಲಾಗಿ ಪರಿಣಮಿಸಿದೆ ಎಂದು ಏಷ್ಯಾ ಫೆಸಿಫಿಕ್ ಎಕಾನಾಮಿಕ್ ಕೋ-ಅಪರೇಶನ್ ಫೋರಂನ 21 ರಾಷ್ಟ್ರಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಮುಕ್ತ ವ್ಯಾಪಾರ ಹಾಗೂ ಸರಕಾರಗಳಿಂದ ಹೆಚ್ಚಿನ ಬೆಂಬಲ ದೊರೆತಲ್ಲಿ ಆರ್ಥಿಕ ಬಿಕ್ಕಟ್ಟು ತಡೆ ಸಾಧ್ಯವಾಗಲಿದೆ. ಜಾಗತಿಕ ಮಟ್ಟದಲ್ಲಿ ವಹಿವಾಟು ಸಂಸ್ಥೆಗಳು ಮಾತುಕತೆಯನ್ನು ಮುಂದುವರಿಸಬೇಕು ಎಂದು ಅಪೆಕ್ ಮನವಿ ಮಾಡಿದೆ.
ಆರ್ಥಿಕ ಬಿಕ್ಕಟ್ಟು ನಿಯಂತ್ರಣಕ್ಕೆ ಆರ್ಥಿಕ ಹಾಗೂ ಹಣಕಾಸಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಜಾಗತಿಕ ಮಟ್ಟದ ನಾಯಕರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ಕುಸಿತ ನಿಯಂತ್ರಣಕ್ಕೆ ಪರಸ್ಪರ ಸಹಕಾರಗಳಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಾಗುವುದು ಎಂದು ಪೆರುವಿನಲ್ಲಿ ನಡೆದ ಎರಡು ದಿನಗಳ ಅಪೆಕ್ ಸಭೆಯಲ್ಲಿ ಜಾಗತಿಕ ನಾಯಕರು ಪ್ರಮಾಣ ಮಾಡಿದ್ದಾರೆ ಎಂದು ಅಪೆಕ್ ಅಧ್ಯಕ್ಷರು ತಿಳಿಸಿದ್ದಾರೆ. |