ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್
ಟೈಟಾನ್ ಇಂಡಸ್ಟ್ರೀಸ್,ಮುಂಬರುವ ಮೂರು ವರ್ಷಗಳಲ್ಲಿ ದೇಶದಾದ್ಯಂತ 'ಟೈಟಾನ್ ಐ ' 300 ರಿಟೇಲ್ ಮಳಿಗೆಗಳನ್ನು ಆರಂಭಿಸಲು ಉದ್ದೇಶಿಸಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷದಲ್ಲಿ 20 ಶೋರೂಂಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಟೈಟಾನ್ ಇಂಡಸ್ಟ್ರೀಸ್ ರಿಟೇಲ್ ಸರ್ವಿಸ್ ಉಪಾಧ್ಯಕ್ಷ ವಿ.ಗೋವಿಂದ್ ರಾಜ್‌ ತಮಿಳಿನಾಡಿನ ಕೊಯಿಮುತ್ತೂರ್‌ನಲ್ಲಿ 5ನೇಯ ಹಾಗೂ ಭಾರತದಲ್ಲಿ 40 ನೇಯ ಶೋರೂಂ ಉದ್ಘಾಟಿಸಿ ಮಾತನಾಡುತ್ತಿದ್ದರು.

ದೇಶದ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗಿದ್ದರಿಂದ 2009-10 ರಲ್ಲಿ 50 ಕೋಟಿ ರೂ.ಗಳು, 2011-12ರಲ್ಲಿ 300 ಕೋಟಿ ರೂ. ಹಾಗೂ 2012-13 ರಲ್ಲಿ 500 ಕೋಟಿ ರೂ.ಗಳನ್ನು ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಗೋವಿಂದ್‌ರಾಜ್ ತಿಳಿಸಿದ್ದಾರೆ.

ಟೈಟಾನ್ ಇಂಡಸ್ಟ್ರೀಸ್, ಟಾಟಾ ಗ್ರೂಪ್ ಮತ್ತು ತಮಿಳುನಾಡು ಇಂಡಸ್ಟ್ರೀಯಲ್ ಡೆವಲೆಪ್‌ಮೆಂಟ್ ಕಾರ್ಪೋರೇಶನ್‌ನ ಜಂಟಿ ಸಹಭಾಗಿತ್ವದಲ್ಲಿ ಮುನ್ನಡೆಯುತ್ತಿದ್ದು,2007-08ರಲ್ಲಿ 3,041 ಕೋಟಿ ರೂ ವಹಿವಾಟು ನಡೆಸಿದೆ ಎಂದು ತಿಳಿಸಿದ್ದಾರೆ.

ಟೈಟಾನ್ ಇಂಡಸ್ಟ್ರೀಸ್, ತನಿಷ್ಕ್‌ ಬ್ರ್ಯಾಂಡ್‌ನ ಆಭರಣಗಳು ಹಾಗೂ ಅಟೋಮೊಬೈಲ್ ಮತ್ತು ಏರೋಸ್ಪೇಸ್ ಕ್ಷೇತ್ರಗಳಿಗೆ ತಂತ್ರಜ್ಞಾನ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಗೋವಿಂದರಾಜ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತ್ವರಿತ ಆರ್ಥಿಕ ನೀತಿ ಜಾರಿಗೆ ಅಪೆಕ್ ವಾಗ್ದಾನ
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್
ನ್ಯಾನೋಗೆ ಮಾಲಿನ್ಯ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ
ಪ್ರವಾಸೋದ್ಯಮದಲ್ಲಿ ಶೇ 10 ರಷ್ಟು ಇಳಿಕೆ: ಅಸೋಚಾಮ್
10 ಕಂಪೆನಿಗಳಿಗೆ ವಾರದಲ್ಲಿ 30 ಸಾ.ಕೋಟಿ ನಷ್ಟ
ಆರ್ಥಿಕ ಕುಸಿತ ತುಂಬಾ ಕರಾಳವಾಗಿದೆ; ಜಿಂಟಾವೊ