ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಎಸ್‌ಬಿಐ ಪ್ರವೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಎಸ್‌ಬಿಐ ಪ್ರವೇಶ
ದೇಶದ ನಂಬರ್ ಒನ್ ಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಇನ್ಸೂರೆನ್ಸ್ ಆಸ್ಟ್ರೇಲಿಯಾ ಗ್ರೂಪ್‌ (ಐಎಜಿ) ಜಂಟಿ ಸಹಭಾಗಿತ್ವದಲ್ಲಿ ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಲಗ್ಗೆ ಹಾಕಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಶೇ.74 ರಷ್ಟು ಶೇರುಗಳನ್ನು ಹೊಂದಲಿದ್ದು ರಿಸರ್ವ್‌ ಬ್ಯಾಂಕ್ ನಿಯಮದಂತೆ ಉಳಿದ ಶೇ.24 ರಷ್ಟು ಶೇರುಗಳನ್ನು ಐಎಜಿ ಪಾಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯವಿರುವ ಅನುಮೋದನೆಗಳಿಗೆ ಸರಕಾರದಿಂದ ನಿರೀಕ್ಷಿಸಲಾಗುತ್ತಿದ್ದು ಮುಂಬರುವ ಸಾಲಿನ ಆರ್ಥಿಕ ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಎಸ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಬಿಐ ಅಧ್ಯಕ್ಷ ಒ.ಪಿ.ಭಟ್ ಮಾತನಾಡಿ, ಜಂಟಿಸಹಭಾಗಿತ್ವದಲ್ಲಿ ಜನರಲ್‌ ಇನ್ಸೂರೆನ್ಸ್, ವಹಿವಾಟಿಗೆ ಮುಂದಾಗಿದ್ದು,ಬ್ಯಾಕಿಂಗ್ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡು ಹೋಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ವಿಮೆ ವಹಿವಾಟು ನಿರೀಕ್ಷಿತ ಪ್ರಮಾಣದಲ್ಲಿ ವೃದ್ಧಿಯಾಗದೇ ನಿಧಾನಗತಿಯಲ್ಲಿ ಸಾಗುತ್ತಿದೆ.ಜನರಲ್ ಇನ್ಸೂರೆನ್ಸ್ ಮುಂಬರುವ ಹತ್ತು ವರ್ಷಗಳಲ್ಲಿ ವಾರ್ಷಿಕವಾಗಿ ಶೇ.15 ರಿಂದ ಶೇ.20 ರಷ್ಟು ಏರಿಕೆ ಕಾಣಲಿದೆ ಎಂದು ಭಟ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಆರ್ಥಿಕತೆ ಕುಸಿಯುತ್ತಿಲ್ಲ: ಚಿದಂಬರಂ
ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್
ತ್ವರಿತ ಆರ್ಥಿಕ ನೀತಿ ಜಾರಿಗೆ ಅಪೆಕ್ ವಾಗ್ದಾನ
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್
ನ್ಯಾನೋಗೆ ಮಾಲಿನ್ಯ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ
ಪ್ರವಾಸೋದ್ಯಮದಲ್ಲಿ ಶೇ 10 ರಷ್ಟು ಇಳಿಕೆ: ಅಸೋಚಾಮ್