ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯಮಿಗಳ ಸಂಪತ್ತಿಗೆ ಕನ್ನ ಹಾಕಿದ ಶೇರುಪೇಟೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮಿಗಳ ಸಂಪತ್ತಿಗೆ ಕನ್ನ ಹಾಕಿದ ಶೇರುಪೇಟೆ
ಭಾರತದ ಪ್ರಮುಖ ಉದ್ಯಮಿಗಳಿಗೆ ಪ್ರಸಕ್ತ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಂಕಷ್ಟದ ಸಮಯವಾಗಿದೆ ಎಂದು ಏಷ್ಯಾ ಶ್ರೀಮಂತರ ಪಟ್ಟಿಯಲ್ಲಿ ಫೋರ್ಬ್ಸ್ ಪ್ರಕಟಿಸಿದೆ.

ಮಾರುಕಟ್ಟೆಯಲ್ಲಿ ಶೇರುಪೇಟೆ ಕುಸಿತ ,ರೂಪಾಯಿ ಅಪಮೌಲ್ಯ ಮತ್ತು ನಿಧಾನಗತಿಯ ಆರ್ಥಿಕ ಅಭಿವೃದ್ಧಿಯಿಂದಾಗಿ ದೇಶದ 40 ಶ್ರೀಮಂತ ಉದ್ಯಮಿಗಳ ಶೇ.60 ರಷ್ಟು ಸಂಪತ್ತು ಕುಸಿತಕ್ಕೆ ಕಾರಣವಾಗಿದೆ. ವರ್ಷದ ಹಿಂದಿದ್ದ ಉದ್ಯಮಿಗಳ ನಿವ್ವಳ ಸಂಪತ್ತು 351 ಬಿಲಿಯನ್ ಡಾಲರ್‌ಗಳಿದ್ದ ಆಸ್ತಿ ಪ್ರಸ್ತುತ 139 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ದೇಶದ ಖ್ಯಾತ ಉದ್ಯಮಿಗಳು ಆರ್ಥಿಕ ಕುಸಿತದ ವೇದನೆಯನ್ನು ಅನುಭವಿಸುತ್ತಿದ್ದಾರೆ. ಕೆಲ ತಿಂಗಳುಗಳಿಂದ ನೂತನ ಗ್ರಾಹಕರನ್ನು ಸೆಳೆಯಲು ಬ್ಯಾಂಕ್‌ಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಆಕ್ಸಿಸ್ ಬ್ಯಾಂಕ್‌ನ ಅಧ್ಯಕ್ಷೆ ಸೋನು ಭಾಸಿನ್ ತಿಳಿಸಿದ್ದಾರೆ.

ಆರ್ಥಿಕ ಕುಸಿತದಿಂದ ಪ್ರತಿಯೊಬ್ಬರಿಗೂ ನೋವಾಗಿದೆ. ಜನತೆ ಆತಂಕದಲ್ಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 9ರಷ್ಟಿದ್ದು, ಶೇರುಪೇಟೆಯ ಏರಿಕೆಯಿಂದಾಗಿ ಮಿಲಿಯನರ್‌ಗಳನ್ನು ಸೃಷ್ಟಿಸಿ ಏಷ್ಯಾದ ಮೂರನೇ ಬೃಹತ್ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಹೊರಹೊಮ್ಮಿತ್ತು ಎಂದು ಸೋನು ವಿವರಣೆ ನೀಡಿದ್ದಾರೆ.

ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರಿಂದ 2007-08ರ ಆರ್ಥಿಕ ಸಾಲಿನಲ್ಲಿ ಭಾರತದಲ್ಲಿ 123,000 ಮಿಲಿಯನರ್‌‌ಗಳ ಸೃಷ್ಟಿಯಾಗಿತ್ತು.ಆದರೆ ಶೇರುಪೇಟೆ ಕುಸಿತದಿಂದಾಗಿ ಶೇ 60 ರಷ್ಟು ಉದ್ಯಮಿಗಳ ಸಂಪತ್ತು ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಎಸ್‌ಬಿಐ ಪ್ರವೇಶ
ಭಾರತದ ಆರ್ಥಿಕತೆ ಕುಸಿಯುತ್ತಿಲ್ಲ: ಚಿದಂಬರಂ
ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್
ತ್ವರಿತ ಆರ್ಥಿಕ ನೀತಿ ಜಾರಿಗೆ ಅಪೆಕ್ ವಾಗ್ದಾನ
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ:ಕಾರ್ನಿಕ್
ನ್ಯಾನೋಗೆ ಮಾಲಿನ್ಯ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ