ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೈಸೂರು ಸಿಲ್ಕ್ಸ್‌‌: 14 ನೂತನ ವಿನ್ಯಾಸ ಮಾರುಕಟ್ಟೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರು ಸಿಲ್ಕ್ಸ್‌‌: 14 ನೂತನ ವಿನ್ಯಾಸ ಮಾರುಕಟ್ಟೆಗೆ
NRB
ಪ್ರತಿಷ್ಠಿತ ಮೈಸೂರು ಸಿಲ್ಕ್‌ನ ವಿನೂತನ ಪರಿಕಲ್ಪನೆಯಿಂದಾಗಿ ಕರ್ನಾಟಕದ ಗತ ವೈಭವದ ಕುರುಹಾಗಿರುವ ಬೇಲೂರು, ಹಳೆಬೀಡು ಹಾಗೂ ಹಂಪಿ ಸಾಮ್ರಾಜ್ಯದ ಸೊಗಡು ಇನ್ನು ನಾರಿಯರ ಸೀರೆಗಳಲ್ಲಿ ಶೋಭಿಸಲಿದೆ. ರಾಜ್ಯ ಸರಕಾರದ ಕರ್ನಾಟಕ ರೇಷ್ಮೆ ಉದ್ದಿಮೆ ಸಂಸ್ಥೆ (ಕೆಎಸ್ಐಸಿ) ತನ್ನ ವಿಶಿಷ್ಟ ಬಣ್ಣಗಳ 14 ಬಗೆಯ ವಿನ್ಯಾಸಗಳನ್ನು ಮಂಗಳವಾರ ಬಿಡುಗಡೆಗೊಳಿಸಿದೆ.

ನಗರದ ಪ್ರಸಿದ್ಧ ಮಾಡೆಲ್‌‌ಗಳು ಹೊಸ ವಿನ್ಯಾಸದ ಸೀರೆಗಳನ್ನು ಧರಿಸಿ ರಾಂಪ್‌ನಲ್ಲಿ ಹೆಜ್ಜೆ ಹಾಕಿದರು. ಕನ್ನಡದ ನಟಿ ಸುಧಾರಾಣಿ ಕಂಪೆನಿಯ ಉತ್ಪನ್ನಗಳ ರಾಯಭಾರಿಯಾಗಿದ್ದಾರೆ.
ನಗರದ ಖ್ಯಾತ ವಿನ್ಯಾಸಗಾರ್ತಿ ದೀಪಿಕಾ ಗೋವಿಂದ ವಿನ್ಯಾಸಗೊಳಿಸಿರುವ ಪ್ರತಿ ಸೀರೆಗಳ ಬೆಲೆ ಅದರ ಗುಣಮಟ್ಟಕ್ಕನುಗುಣವಾಗಿ 13,000 ರೂ. ನಿಂದ 32,000 ರೂ.ವರಗೆ ಇದೆ. ಪ್ರತಿ ಸೀರೆಗಳನ್ನು ಕೆಎಸ್ಐಸಿ ಶೇ. 100 ರಷ್ಟು ಗುಣಮಟ್ಟದಲ್ಲಿ ತಯಾರಿಸಲಾಗಿದೆ.

ಕೆಎಸ್ಐಸಿ ತನ್ನ ಕಚೇರಿಯನ್ನು ನಗರದ ಎಂ.ಜಿ.ರಸ್ತೆಯಲ್ಲಿ ತೆರೆದಿದ್ದು, ಗ್ರಾಹಕರ ಅಗತ್ಯಕ್ಕಾಗಿ ತನ್ನ ವಿನ್ಯಾಸಗಳನ್ನು ವಿಶಿಷ್ಟವಾಗಿ ರೂಪಿಸಿದೆ. ಆಧುನೀಕತೆಗೆ ಹಾಗೂ ಸಂಪ್ರದಾಯಕ್ಕೂ ಒಗ್ಗುವಂತಹ ನವಿರಾದ ಸೀರೆಗಳನ್ನು ಈ ಬಾರಿ ಕೆಎಸ್ಐಸಿ ಸಿದ್ಧಪಡಿಸಿರುವುದಾಗಿ ತಿಳಿಸಿದೆ.

ಉತ್ತಮ ಗುಣಮಟ್ಟದ ಉತ್ಪನ್ನಗಳಿಂದ ಪ್ರಸಿದ್ದಿಯಾಗಿರುವ ಮೈಸೂರು ಸಿಲ್ಕ್, ಸುಮಾರು 2 ದಶಕಗಳಿಂದ ಗ್ರಾಹಕರ ಮನಸೂರೆಗೊಳ್ಳುವಂತಹ ವಿಶಿಷ್ಟ ಬಗೆಯ ಸೀರೆಗಳನ್ನು ತಯಾರಿಸುತ್ತಾ ಬಂದಿದೆ. ಕೆಎಸ್ಐಸಿಗೆ 2005ರಲ್ಲಿ ಐಎಸ್ಒ 9001-2000 ಕಂಪೆನಿ ಎಂಬ ಮಾನ್ಯತೆ ದೊರೆತ್ತಿದ್ದು, ಇದು ನಿಫ್ಟ್ (ಎನ್ಐಎಫ್‌ಟಿ) ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿ. 24ರ ನಂತರ ತೈಲ ದರ ಇಳಿಕೆ ಸಾಧ್ಯತೆ ?- ದೇವ್ರಾ
ಸಾಲ ದ್ವಿಗುಣಕ್ಕೆ ವಿಶ್ವಬ್ಯಾಂಕ್‌ಗೆ ಮನವಿ:ಚಿದಂಬರಂ
ಉದ್ಯಮಿಗಳ ಸಂಪತ್ತಿಗೆ ಕನ್ನ ಹಾಕಿದ ಶೇರುಪೇಟೆ
ಜನರಲ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಎಸ್‌ಬಿಐ ಪ್ರವೇಶ
ಭಾರತದ ಆರ್ಥಿಕತೆ ಕುಸಿಯುತ್ತಿಲ್ಲ: ಚಿದಂಬರಂ
ಮೂರು ವರ್ಷದಲ್ಲಿ 300 ಮಳಿಗೆಗಳ ಆರಂಭ;ಟೈಟಾನ್