ಸರಕಾರದಿಂದ ನಿರೀಕ್ಷಣಾ ಸಾಲ ಪಡೆದುಕೊಂಡು ಚೇತರಿಸಿಕೊಳ್ಳುತ್ತಿರುವ ಅಮೆರಿಕಾದ ಎರಡನೇ ಅತಿ ದೊಡ್ಡ ಬ್ಯಾಂಕ್‌ನ ಈ ಹಿಂದಿನ ಆಡಳಿತವು ಅಮೆರಿಕಾದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅಗತ್ಯಕ್ಕಿಂತ ಹೆಚ್ಚು ತೊಡಗಿಸಿಕೊಂಡದ್ದನ್ನು ಸಿಟಿಗ್ರೂಪ್ ಮುಖ್ಯಸ್ಥ ವಿಕ್ರಮ್ ಪಂಡಿತ್ ಟೀಕಿಸಿದ್ದಾರೆ.
"ಅಮೆರಿಕಾದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚಿನ ಗಮನ ಕೊಟ್ಟು ಸಾಕಷ್ಟು ಹಣ ಕಳೆದುಕೊಂಡಿದ್ದೇವೆ. ನಾವು ಹೋದ ಹಾದಿ ತಪ್ಪಾಗಿತ್ತು" ಎಂದು ಪಂಡಿತ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. "ಬೇರೆ ಉದ್ಯಮಗಳಲ್ಲಿ ಹೂಡಬಹುದಾಗಿದ್ದ ಬಂಡವಾಳವನ್ನು ಅಮೆರಿಕಾದ ರಿಯಲ್ ಎಸ್ಟೇಟ್‌ನಲ್ಲಿ ಹೂಡಿದ್ದೆವು. ಇದರಿಂದಾಗಿ ಹಣ ನಮ್ಮ ಕೈತಪ್ಪಿ ಹೋಗಿದೆ" ಎಂದು ಪಂಡಿತ್ ತಿಳಿಸಿದ್ದಾರೆ.
ಕಳೆದ ಭಾನುವಾರ ಅಮೆರಿಕಾ ಸರಕಾರ ಸಿಟಿಗ್ರೂಪ್ ಸಹಾಯಕ್ಕೆ ಬಂದು ಕುಸಿತವನ್ನು ತಡೆದಿತ್ತು. ಸುಮಾರು 306 ಬಿಲಿಯನ್ ಡಾಲರ್ ಬೆಲೆ ಬಾಳುವ ಸಿಟಿಗ್ರೂಫ್ 20 ಮಿಲಿಯನ್ ಡಾಲರ್ ಸಾಲವನ್ನು ಅಮೆರಿಕಾ ಸರಕಾರದಿಂದ ಪಡೆದಿತ್ತು. ಕಳೆದ ವರ್ಷ ಕೂಡ ಸಿಟಿಗ್ರೂಪ್ 20.3 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದು, ಸದ್ಯಕ್ಕೆ ಲಾಭದ ಮಾರ್ಗದಲ್ಲಿ ಹೋಗುವ ಯಾವುದೇ ಲಕ್ಷಣಗಳಿಲ್ಲ ಎನ್ನಲಾಗುತ್ತಿದೆ. ಈ ನಡುವೆ ಸಿಟಿಗ್ರೂಪ್ ಸಾವಿರಾರು ಹುದ್ದೆಗಳನ್ನು ಕಡಿತಗೊಳಿಸುವುದಾಗಿಯೂ ಪ್ರಕಟಿಸಿದೆ.
"ಮುಖ್ಯವಾಹಿನಿಯ ಜನರನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ವ್ಯವಹಾರದಲ್ಲಿ ತೀರಾ ಹತ್ತಿರವಿದ್ದವರು ಈಗ ಆಗಿರುವ ಅನಾಹುತದ ಬಗ್ಗೆ ತೀವ್ರ ರೋಷ ವ್ಯಕ್ತಪಡಿಸಿದ್ದಾರೆ" ಎಂದು ಪಂಡಿತ್ ಹೇಳಿದರು. ಇದೀಗ ಹಲವು ಸುರಕ್ಷಿತ ಹೂಡಿಕೆದಾರರು ಮತ್ತೆ ಸಿಟಿಗ್ರೂಪ್ ಶೇರು ಖರೀದಿಯತ್ತ ಒಲವು ತೋರಿಸುತ್ತಿದ್ದಾರೆ.
|