ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬರಲಿದೆ ನೋಕಿಯಾ 5800 ಟಚ್‌ ಸ್ಕ್ರೀನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಲಿದೆ ನೋಕಿಯಾ 5800 ಟಚ್‌ ಸ್ಕ್ರೀನ್
ಬಹುನಿರೀಕ್ಷಿತ ನೋಕಿಯಾ ಕಂಪನಿಯ ಟಚ್‌ ಸ್ಕ್ರೀನ್ ಮೊಬೈಲ್ ಫೋನುಗಳು ಕೊನೆಗೂ ಭಾರತಕ್ಕೆ ಕಾಲಿಟ್ಟಿವೆ. ಆಪಲ್‌ನವರ ಐಫೋನ್‌ಗೆ ನೋಕಿಯಾ ಇದೀಗ ಹೊರ ತಂದಿರುವ 5800 ಎಕ್ಸ್‌ಪ್ರೆಸ್ ಮ‌್ಯೂಸಿಕ್ ಟಚ್‌ ಸ್ಕ್ರೀನ್ ಮೊಬೈಲ್ ಉತ್ತರವಾಗಲಿದೆ ಎಂಬ ಮಾತುಗಳು ಹೆಚ್ಚು ಚರ್ಚಿತವಾಗುತ್ತಿದ್ದು, ಕಂಪನಿಗೆ ಉತ್ತಮ ಲಾಭ ತಂದು ಕೊಡುವ ಭರವಸೆಯೂ ಇದೆ.

ಜಗತ್ತಿನ ಅತಿದೊಡ್ಡ ಸೆಲ್‌ಫೋನ್ ತಯಾರಿಕಾ ಸಂಸ್ಥೆಯಾಗಿರುವ ನೋಕಿಯಾ ಆಪಲ್ ಕಂಪನಿಯ ಐಫೋನ್ ಬೆಲೆಗಿಂತ ಅಗ್ಗದಲ್ಲಿ ನೋಕಿಯಾ 5800 ಟಚ್‌ಸ್ಕ್ರೀನ್ ಮೊಬೈಲನ್ನು ಮಾರಾಟ ಮಾಡಲಿದೆ. ಎಂಟು ಜಿಬಿ ಸಾಮರ್ಥ್ಯದ ಐಫೋನ್‌ಗಿಂತ ಸುಮಾರು ಒಂಬತ್ತು ಸಾವಿರ ಮತ್ತು 16 ಜಿಬಿ ಸಾಮರ್ಥ್ಯದ ಐಫೋನ್‌ಗಿಂತ 14 ಸಾವಿರ ರೂಪಾಯಿ ಕಡಿಮೆ ಬೆಲೆಯಲ್ಲಿ ನೋಕಿಯಾ 5800 ಟಚ್‌ ಸ್ಕ್ರೀನ್ ಸೆಟ್ ಮಾರಲಾಗುತ್ತದೆ.

ಅಷ್ಟೇ ಅಲ್ಲದೆ ನೋಕಿಯಾ 5800 ವಿವಿಧ 60 ಭಾಷೆಗಳಲ್ಲಿ ಲಭ್ಯವಿದೆ. ಮುಂದಿನ ವರ್ಷದ ಜನವರಿಗಿಂತ ಮೊದಲೇ ಮಾರುಕಟ್ಟೆಯಲ್ಲಿರುತ್ತದೆ ಎಂದಿದೆ ಸಂಸ್ಥೆ. ಇದು ಮ‌್ಯೂಸಿಕ್ ಸೇವೆಯನ್ನೂ ಒದಗಿಸಲಿದ್ದು, ಆಪಲ್ ಐಫೋನ್‌ಗೆ ತಕ್ಕ ಪ್ರತಿಸ್ಪರ್ಧೆಯನ್ನು ನೀಡಲಿದೆ ಎಂಬ ಭರವಸೆ ನೋಕಿಯಾ ಕಂಪನಿಯದು.

ಐಫೋನ್‌ನಂತೆ ನೋಕಿಯಾ 5800 ಟಚ್‌ಸ್ಕ್ರೀನ್ 3.2 ಇಂಚಿನ ಪರದೆಯಲ್ಲಿ 640X480ರ ಪಿಕ್ಸೆ‌ಲ್‌ನ ದೊಡ್ಡ ಪರದೆಯನ್ನೇ ಹೊಂದಿದೆ. ಅತ್ಯಧಿಕ ರೆಸೊಲ್ಯೂಷನ್‌ನ ಈ ಮೊಬೈಲಿನಲ್ಲಿ ಎಲ್ಲಾ ರೀತಿಯ ವಿಡಿಯೋಗಳನ್ನು ವೀಕ್ಷಿಸಬಹುದು. ಕೈಬೆರಳು ಅಥವಾ ಕಡ್ಡಿಯ ಮ‌ೂಲಕ ಇದನ್ನು ಅಪರೇಟ್ ಮಾಡಬಹುದಾಗಿದೆ.

ನೋಕಿಯಾ 5800 ಟಚ್‌ಸ್ಕ್ರೀನ್ 81 ಎಂ.ಬಿ. ಇಂಟರ್‌ನಲ್ ಮೆಮೊರಿ ಹೊಂದಿದ್ದು, 8 ಜಿ.ಬಿ. ಮೈಕ್ರೋ ಎಸ್‌ಡಿ ಕಾರ್ಡನ್ನು ಕೂಡಾ ಬಳಸಬಹುದಾಗಿದೆ. ಸುಮಾರು 6 ಸಾವಿರ ಹಾಡುಗಳನ್ನು ಶೇಖರಿಸಿಡಬಹುದು. ಜತೆಗೆ ಮೆಮೊರಿಯನ್ನು 16 ಜಿ.ಬಿ.ವರೆಗೂ ವಿಸ್ತರಿಸಲು ಅವಕಾಶವಿದೆ. ಬ್ಯಾಟರಿ ಸುಮಾರು ಒಂಬತ್ತು ಗಂಟೆಗಳಷ್ಟು ದೀರ್ಘಕಾಲದ ಕ್ಷಮತೆಯನ್ನು ಹೊಂದಿರುತ್ತದೆ.

ನೋಕಿಯಾ 5800 ಮೊಬೈಲ್ 3.2 ಮೆಗಾಪಿಕ್ಸೆಲ್ ಕ್ಯಾಮರಾ, ಫ್ಲ್ಯಾಶ್ ಜತೆಗೆ ಪೇಸಿಂಗ್ ಕ್ಯಾಮರಾವನ್ನು ಸಹ ಹೊಂದಿದೆ. ಸ್ಟೀರಿಯೋ ಸ್ಪೀಕರ್, ನೋಕಿಯಾ ಮ್ಯಾಪ್, ಜಿಪಿಎಸ್, ವೈ-ಫೈ, ಸ್ಟೀರಿಯೋ ಬ್ಲೂಟೂತ್ ಮತ್ತು 3.5 ಎಂ.ಎಂ. ಹೆಡ್‌ಫೋನ್ ಕೂಡ ಜತೆಗಿರುತ್ತದೆ.

ಭಾರತದಲ್ಲಿ ಈ ಮೊಬೈಲ್‌‌ನ ಬೆಲೆ 21,839 ಎಂದು ನಿಗದಿಪಡಿಸಲಾಗಿದೆ. ಆದರೆ ಆಪಲ್ ಐಫೋನಿನನ್ನು ಭಾರತದಲ್ಲಿ 8 ಜಿ.ಬಿ. ಬೆಲೆ 31 ಸಾವಿರ ಹಾಗೂ 16 ಜಿ.ಬಿ.ಯ ಬೆಲೆ 36 ಸಾವಿರ. ಆದರೆ ಐಫೋನ್‌ಕ್ಕಿಂತ ನೋಕಿಯಾ ಟಚ್‌ ಸ್ಕ್ರೀನ್ ಮೊಬೈಲ್ ಬೆಲೆ ಅಗ್ಗವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಟಿಗ್ರೂಪ್ ತಪ್ಪು ಮಾಡಿತ್ತು: ವಿಕ್ರಮ ಪಂಡಿತ್
ವಿಮಾನಯಾನದ ಟಿಕೆಟ್ ನಿರ್ವಹಣಾ ವೆಚ್ಚ ರದ್ದು
ಮೈಸೂರು ಸಿಲ್ಕ್ಸ್‌‌: 14 ನೂತನ ವಿನ್ಯಾಸ ಮಾರುಕಟ್ಟೆಗೆ
ಡಿ. 24ರ ನಂತರ ತೈಲ ದರ ಇಳಿಕೆ ಸಾಧ್ಯತೆ ?- ದೇವ್ರಾ
ಸಾಲ ದ್ವಿಗುಣಕ್ಕೆ ವಿಶ್ವಬ್ಯಾಂಕ್‌ಗೆ ಮನವಿ:ಚಿದಂಬರಂ
ಉದ್ಯಮಿಗಳ ಸಂಪತ್ತಿಗೆ ಕನ್ನ ಹಾಕಿದ ಶೇರುಪೇಟೆ