ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜವಳಿ: ಮತ್ತಷ್ಟು ಹುದ್ದೆ ಕಡಿತ ಸಂಭವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜವಳಿ: ಮತ್ತಷ್ಟು ಹುದ್ದೆ ಕಡಿತ ಸಂಭವ
ಜಾಗತಿಕ ಆರ್ಥಿಕ ಕುಸಿತದ ಕಾರಣದಿಂದಾಗಿ ವಸ್ತ್ರೋದ್ಯಮದಲ್ಲಿ ಇನ್ನಷ್ಟು ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ ಗುಜರಾತ್ ವಲಯದಲ್ಲಿ ಹೆಚ್ಚಿನ ಜನ ಇದರ ಬಾಧೆಗೊಳಗಾಗಿದ್ದಾರೆ. ಇದುವರೆಗೆ ಸುಮಾರು ಐದರಿಂದ ಏಳು ಲಕ್ಷದಷ್ಟು ಕೆಲಸಗಾರರು ತಮ್ಮ ಹುದ್ದೆಗಳನ್ನು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಂಭವವಿದೆ ಎಂಬ ಮಾತುಗಳು ಗುಜರಾತ್‌ನಲ್ಲಿ ನಡೆಯುತ್ತಿರುವ ಸಮ್ಮೇಳನವೊಂದರಲ್ಲಿ ಕೇಳಿ ಬಂತು.

"ಜವಳಿ ಉದ್ಯಮ ಬರಡಾಗುತ್ತಿದೆ ಮತ್ತು ಇದಕ್ಕೆ ಬ್ಯಾಂಕುಗಳ ಸಹಕಾರದ ಅಗತ್ಯವಿದೆ" ಎಂದು ಮಹೇಂದ್ರ ತೋರಾ ಪ್ರೈವೆಟ್ ಲಿಮಿಟೆಡ್‌ನ ರಾಮ ಕೃಷ್ಣ ಮುಂದ್ರಾ ಅಭಿಪ್ರಾಯ. ನವೆಂಬರ್ 26ರಂದು 'ಪ್ರಸಕ್ತ ಹಣಕಾಸಿನ ಪರಿಸ್ಥಿತಿ' ಸಮ್ಮೇಳನದಲ್ಲಿ ಮಾತನಾಡುತ್ತಾ ಅವರು ಈ ರೀತಿ ಹೇಳಿದ್ದಾರೆ. ಈ ಸಮಾವೇಶವನ್ನು ಅಹಮದಾಬಾದ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿಸಿತ್ತು.

ನೂಲುವ ಯಂತ್ರದ ಮಾಲೀಕರು ಮತ್ತು ನೇಯ್ಗೆ ಮಾಡುವವರು ಇತ್ತೀಚಿನ ದಿನಗಳಲ್ಲಿ ಭಾರೀ ಸಂಕಷ್ಟಕ್ಕೊಳಗಾಗಿದ್ದಾರೆ. "ಪ್ರಸಕ್ತ ದುಸ್ಥಿತಿಯಿಂದ ಜವಳಿ ಉದ್ಯಮ ಹೊರಬರಲು ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಸಬೇಕಾಗಿದೆ" ಎಂಬ ಬೇಡಿಕೆಯೂ ಹಲವು ಉದ್ಯಮಿಗಳಿಂದ ಕೇಳಿ ಬಂತು.

"ವಿವಿಧ ರಾಜ್ಯಗಳಲ್ಲಿ ಮೌಲ್ಯವರ್ಧಿತ ತೆರಿಗೆಗಳು ಭಿನ್ನ ರೀತಿಯಲ್ಲಿರಬಾರದು. ನಮಗೆ ಸಾಕಷ್ಟು ಸ್ಪರ್ಧೆಗಳಿರುವುದರಿಂದ ಎಲ್ಲದರ ಜತೆ ಹೊಂದಾಣಿಕೆ ಸಾಧ್ಯವಾಗದು. ತೆರಿಗೆ, ಆಮದು ರಫ್ತಿನ ಸುಂಕ ಹಾಗೂ ಇತರ ತೆರಿಗೆಗಳಲ್ಲಿ ರಿಯಾಯಿತಿ ನೀಡುವ ಅಗತ್ಯವಿದೆ" ಎಂದು ಸಮಾವೇಶದಲ್ಲಿ ಮಾತನಾಡುತ್ತಾ ಗುಜರಾತ್ ಚಾಪ್ಟರ್ ಅಧ್ಯಕ್ಷ ವಿಮಲ್ ಅಂಬಾನಿ ತಿಳಿಸಿದ್ದಾರೆ.

ಸಾಮಾನ್ಯ ಮತ್ತು ಮಧ್ಯಮ ಕೈಗಾರಿಕೆಗಳು ಸಾಕಷ್ಟು ಹಣಕಾಸಿನ ಬಂಡವಾಳಗಳಿಲ್ಲದೆ ಸೊರಗುತ್ತಿವೆ. "ಎಸ್.ಎಂ.ಇ. ಐದು ಕೋಟಿ ಸಾಲ ಕೇಳಿದೆ. ಆದರೆ ಸಿಕ್ಕಿರುವುದು ನಾಲ್ಕೇ ಕೋಟಿ. ಅವರಿಗೆ ನಿಜವಾಗಿ ಆರು ಕೋಟಿಯನ್ನೇ ಕೊಡಬೇಕಿತ್ತು. ಆ ರೀತಿಯ ದಿಟ್ಟ ಹೆಜ್ಜೆಗಳನ್ನು ಇಡಬೇಕಾದ ಸಮಯ ಬಂದಿದೆ" ಎಂದೂ ಅಂಬಾನಿ ತಿಳಿಸಿದರು.

ಇತ್ತೀಚೆಗಷ್ಟೇ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ವಸ್ತ್ರೋದ್ಯಮದಲ್ಲಿ ಮುಂದಿನ ಸುಮಾರು ಐದು ತಿಂಗಳುಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಜಾಗತಿಕ ಆರ್ಥಿಕ ಕುಸಿತ, ಜವಳಿ ಉದ್ಯಮದ ಸಂಕಷ್ಟ, ರಫ್ತು ವಹಿವಾಟು ಕುಸಿತ ಮುಂತಾದ ಕಾರಣಗಳಿಂದ ಕೈಗಾರಿಕೆ ಸೊರಗುತ್ತಿದೆ ಎಂಬುದು ಅವರ ಅಭಿಪ್ರಾಯ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬರಲಿದೆ ನೋಕಿಯಾ 5800 ಟಚ್‌ ಸ್ಕ್ರೀನ್
ಸಿಟಿಗ್ರೂಪ್ ತಪ್ಪು ಮಾಡಿತ್ತು: ವಿಕ್ರಮ ಪಂಡಿತ್
ವಿಮಾನಯಾನದ ಟಿಕೆಟ್ ನಿರ್ವಹಣಾ ವೆಚ್ಚ ರದ್ದು
ಮೈಸೂರು ಸಿಲ್ಕ್ಸ್‌‌: 14 ನೂತನ ವಿನ್ಯಾಸ ಮಾರುಕಟ್ಟೆಗೆ
ಡಿ. 24ರ ನಂತರ ತೈಲ ದರ ಇಳಿಕೆ ಸಾಧ್ಯತೆ ?- ದೇವ್ರಾ
ಸಾಲ ದ್ವಿಗುಣಕ್ಕೆ ವಿಶ್ವಬ್ಯಾಂಕ್‌ಗೆ ಮನವಿ:ಚಿದಂಬರಂ