ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ
ಈ ಹಿಂದೆ 8.90ರಷ್ಟಿದ್ದ ಹಣದುಬ್ಬರ ಪ್ರಮಾಣ ನವೆಂಬರ್ 15ರ ವಾರಾಂತ್ಯದಲ್ಲಿ ಶೇಕಡಾ 8.84ಕ್ಕೆ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಆ ಮ‌ೂಲಕ ರಿಸರ್ವ್ ಬ್ಯಾಂಕ್ ತನ್ನ ಧೋರಣೆಯಲ್ಲಿ ಮತ್ತಷ್ಟು ರಿಯಾಯಿತಿ ತೋರುವ ಸಾಧ್ಯತೆಗಳು ಗೋಚರವಾಗಿವೆ. ಈಗ ದಾಖಲಾಗಿರುವ ಹಣದುಬ್ಬರದ ಪ್ರಮಾಣ ಆರು ತಿಂಗಳಲ್ಲೇ ಅತೀ ಕಡಿಮೆ ಎನ್ನಲಾಗಿದೆ.

ಉಕ್ಕು, ಫಲವಸ್ತುಗಳು ಮತ್ತು ಕೆಲವು ತಯಾರಿಸಲಾದ ಉತ್ಪನ್ನಗಳಾದ ಖಾದ್ಯ ತೈಲ ಮತ್ತು ರಬ್ಬರ್‌ರನ್ನು ಆಮದು ಮಾಡಿಕೊಂಡಿದ್ದು ಅವುಗಳ ಬೆಲೆ ಕುಸಿತ ಕಂಡ ಕಾರಣ ಹಣದುಬ್ಬರ ಕಳೆದ ವಾರಕ್ಕಿಂತ ಶೇಕಡಾ 0.06ರಷ್ಟು ಕುಸಿತ ಕಂಡಿದೆ. ಈ ಹಿಂದೆ 8.9ಕ್ಕೆ ತಲುಪಿದ್ದ ಹಣದುಬ್ಬರ ಮತ್ತೆ ಕುಸಿತ ಕಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲವಸ್ತುಗಳು ಮತ್ತು ಸಮುದ್ರ ಮೀನುಗಳ ಬೆಲೆಯಲ್ಲಿ ಈ ವಾರ ಕುಸಿತ ಕಂಡಿದೆ. ಆದರೆ ಇಂಧನ, ವಿದ್ಯುತ್, ಲೈಟ್, ಕೀಲೆಣ್ಣೆಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣದೆ ಕಳೆದ ವಾರದ ಸ್ಥಿತಿಯನ್ನೇ ಮುಂದುವರಿಸಿವೆ.

ಈ ನಡುವೆ ಆಹಾರ ಪದಾರ್ಥಗಳು, ಅಕ್ಕಿ, ಬೇಳೆ ಪದಾರ್ಥಗಳು ಮತ್ತು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. ಜವಳಿ ವಲಯ ಮತ್ತು ರಾಸಾಯನಿಕ ವಸ್ತುಗಳು ಕೂಡ ಈ ವಾರ ದುಬಾರಿಯೆನಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೈಗರ್ ವುಡ್ಸ್ ನಂತರದ ಸರದಿ ಸೈಫ್?
ಉಗ್ರರ ದಾಳಿ: ಉದ್ಯಮಿಗಳಿಂದ ಖಂಡನೆ
ಶೇರು ಮಾರುಕಟ್ಟೆ ಮುಚ್ಚಬಾರದಿತ್ತು: ಹೂಡಿಕೆದಾರ
ಶೇ.3ರ ಬಡ್ಡಿ ದರದಲ್ಲಿ ಕೃಷಿ ಸಾಲ: ಸವದಿ
ಜವಳಿ: ಮತ್ತಷ್ಟು ಹುದ್ದೆ ಕಡಿತ ಸಂಭವ
ಬರಲಿದೆ ನೋಕಿಯಾ 5800 ಟಚ್‌ ಸ್ಕ್ರೀನ್