ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಜಗತ್ತಿನ ಎರಡು ಅತಿದೊಡ್ಡ ಕಂಪ್ಯೂಟರ್ ತಯಾರಿಕಾ ಕಂಪನಿಗಳಾದ ಡೆಲ್ ಮತ್ತು ಹೆಲ್ವೆಟ್ ಪಾಕಾರ್ಡ್ ಕಂಪನಿಗಳು ತಮ್ಮ ಸಿಬಂದಿಯನ್ನು ಮುಂಬೈಗೆ ಕಳುಹಿಸುವುದನ್ನು ತಡೆಹಿಡಿದಿದ್ದು, ದೇಶದ ಇತರೆಡೆಗೆ ಕೂಡ ಅಗತ್ಯದಷ್ಟು ಸಿಬಂದಿಗಳನ್ನು ಮಾತ್ರ ಕಳುಹಿಸುವ ನಿರ್ಧಾರ ಕೈಗೊಂಡಿದೆ.

"ಸಮಸ್ಯೆಗಳು ಪರಿಹಾರ ಕಾಣುವವರೆಗೆ ನಾವು ನಮ್ಮ ಸಿಬಂದಿಯನ್ನು ಭಾರತಕ್ಕೆ ಕಳುಹಿಸುವುದಿಲ್ಲ. ಮುಂದಿನ 48 ಗಂಟೆಯೊಳಗೆ ಯಾವುದೇ ಡೆಲ್ ಉದ್ಯೋಗಿ ಭಾರತಕ್ಕೆ ಪ್ರಯಾಣಿಸಲು ನಿಷೇಧ ಹೇರಲಾಗಿದೆ" ಎಂದು ಡೆಲ್ ಕಂಪನಿಯ ಜಾಗತಿಕ ಭದ್ರತಾ ಉಪಾಧ್ಯಕ್ಷ ಜಾನ್ ಸ್ಕೇಫರ್ ತಿಳಿಸಿದ್ದಾರೆ.

ಹೆಚ್‌ಪಿ ಕಂಪನಿಯ ಮುಂಬೈ ಕಚೇರಿಯನ್ನು ಮುಚ್ಚಲಾಗಿದ್ದು, ಸಿಬಂದಿ ನಗರದಲ್ಲಿ ತಿರುಗಾಡುವುದಕ್ಕೆ ಪ್ರತಿಬಂಧನ ವಿಧಿಸಲಾಗಿದೆ ಎಂದು ಹೆಲ್ವೆಟ್ ಪಾಕಾರ್ಡ್ ಕಂಪನಿಯ ಸಿಂಗಾಪುರದ ಪ್ರತಿನಿಧಿ ಜೋನೆ ಟಾನ್ ಇ-ಮೈಲ್ ತಿಳಿಸಿದ್ದಾರೆ. ಎರಡೂ ಕಂಪನಿಗಳ ಸಿಬಂದಿಗಳು ಸುರಕ್ಷಿತವಾಗಿದ್ದಾರೆ ಎಂದೂ ಹೇಳಿಕೆಗಳು ತಿಳಿಸಿವೆ.

ಮುಂಬೈಯಲ್ಲಿ ಬುಧವಾರ ರಾತ್ರಿ ಉಗ್ರಗಾಮಿಗಳ ದಾಳಿ ನಡೆದಿದ್ದು, ಇನ್ನೂ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ದುರ್ಘಟನೆಯಲ್ಲಿ ಸುಮಾರು 130 ಜನ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ ಎಂಬ ವರದಿಗಳು ಬಂದಿವೆ. ಈ ಹಿನ್ನಲೆಯಲ್ಲಿ ಪ್ರಮುಖ ಕಂಪನಿಗಳು ಕೂಡ ತಮ್ಮ ವ್ಯವಹಾರಗಳಲ್ಲಿ ನಿಯಂತ್ರಣ ಹೇರಿಕೊಂಡಿದ್ದು, ಭಾರೀ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ಉಗ್ರರ ದಾಳಿ: ರತನ್ ಟಾಟಾ ಖಂಡನೆ
ಬೆಂಗಳೂರು: ಡಿ.13ರಂದು ನ್ಯಾನೋ ಮೇಳ
ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ
ಟೈಗರ್ ವುಡ್ಸ್ ನಂತರದ ಸರದಿ ಸೈಫ್?
ಉಗ್ರರ ದಾಳಿ: ಉದ್ಯಮಿಗಳಿಂದ ಖಂಡನೆ