ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಅಭಿವೃದ್ಧಿ ದರ ಶೇ.7.6ಕ್ಕೆ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ ದರ ಶೇ.7.6ಕ್ಕೆ ಏರಿಕೆ
ದೇಶದ ಆರ್ಥಿಕತೆ ಕುಸಿತವಾಗಲಿದೆ ಎನ್ನುವ ನಿರೀಕ್ಷೆಯ ಮಧ್ಯೆ ಕಟ್ಟಡ ನಿರ್ಮಾಣ ಹಾಗೂ ಸೇವಾ ಕ್ಷೇತ್ರಗಳ ಚುರುಕಿನ ವಹಿವಾಟಿನಿಂದಾಗಿ ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಅಭಿವೃದ್ಧಿ ದರ ಶೇ.7.6ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಆರ್ಥಿಕ ಅಭಿವೃದ್ದಿ ದರ ಶೇ. 7.8 ರಷ್ಟಿದ್ದು ,ಕಳೆದ ವರ್ಷ ಶೇ.9.3 ರಷ್ಟಾಗಿತ್ತು ಎಂದು ಅಧಿಕಾರಿಗಳು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ದೇಶದ ಆರ್ಥಿಕ ಅಭಿವೃದ್ಧಿ ದರವನ್ನು ಶೇ.7-8ಕ್ಕೆ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ಶೇ7.5ರಿಂದ 8 ರವರೆಗೆ ತಲುಪಲಿದೆ ಎಂದು ಹೇಳಿಕೆ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕೃಷಿಮತ್ತು ಕೃಷಿಗೆ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ದರ ಶೇ.2.7 ರಷ್ಟು ಕುಸಿತವಾಗಿದೆ ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ಉಗ್ರರ ದಾಳಿ: ರತನ್ ಟಾಟಾ ಖಂಡನೆ
ಬೆಂಗಳೂರು: ಡಿ.13ರಂದು ನ್ಯಾನೋ ಮೇಳ
ಹಣದುಬ್ಬರ ಪ್ರಮಾಣ ಮತ್ತಷ್ಟು ಇಳಿಕೆ