ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಯೋತ್ಪಾದಕತೆಯಿಂದ ಆರ್ಥಿಕತೆಗೆ ಧಕ್ಕೆಯಿಲ್ಲ:ಎಸ್‌ ಆಂಡ್ ಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದಕತೆಯಿಂದ ಆರ್ಥಿಕತೆಗೆ ಧಕ್ಕೆಯಿಲ್ಲ:ಎಸ್‌ ಆಂಡ್ ಪಿ
ದೇಶದ ಆರ್ಥಿಕತೆ ಸದೃಢವಾಗಿರುವುದರಿಂದ ಶೇರುಪೇಟೆಗಳಲ್ಲಿ ಅಲ್ಪಮಟ್ಟಿಗೆ ಪರಿಣಾಮವಾಗಬಹುದು. ಆದರೆ ಭಯೋತ್ಪಾದಕರ ದಾಳಿಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಜಾಗತಿಕ ಆರ್ಥಿಕ ಸಮೀಕ್ಷೆ ಸಂಸ್ಥೆ ಸ್ಟ್ಯಾಂಡರ್ಡ್ ಆಂಡ್ ಪೂರ್ ಅಭಿಪ್ರಾಯಪಟ್ಟಿದೆ.

ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುವುದಲ್ಲದೇ ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ನಕರಾತ್ಮಕ ಅಂಶಗಳ ಪ್ರಭಾವ ಬೀರಲಿವೆ ಎಂದು ಹೊರಡಿಸಿದ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ.

ಭಾರತದ ಆರ್ಥಿಕತೆ ಹಾಗೂ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಸರಕಾರ ತೆಗೆದುಕೊಂಡ ಆರ್ಥಿಕ ನಿಲುವುಗಳ ಮೇಲೆ ಅಲ್ಪಮಟ್ಟಿಗೆ ಪರಿಣಾಮವಾಗಬಹುದಾದ ಸಾಧ್ಯತೆಗಳಿವೆ. ಆದರೆ ಸಂಪೂರ್ಣ ಆರ್ಥಿಕತೆಗೆ ಧಕ್ಕೆಯಾಗುವುದಿಲ್ಲ ಎಂದು ಎಸ್‌ ಆಂಡ್ ಪಿ ಪ್ರಕಟಿಸಿದೆ.

ವಿದೇಶಿ ವಹಿವಾಟು ಪ್ರವಾಸಿಗರಲ್ಲಿ ಕೆಲ ಮಟ್ಟಿಗೆ ಪರಿಣಾಮವಾಗಲಿರುವುದರಿಂದ ವಿದೇಶಿ ವಿನಿಮಯ ಮಾರುಕಟ್ಟೆ ಹಾಗೂ ಶೇರುಪೇಟೆಗಳ ಮೇಲೆ ಕಡಿಮೆ ಅವಧಿಗೆ ನಕಾರಾತ್ಮಕ ಪ್ರಭಾವ ಎದುರಾಗಲಿದೆ ಎಂದು ಎಸ್‌ ಆಂಡ್ ಪಿ ಸಮೀಕ್ಷಾ ಸಂಸ್ಥೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಭಿವೃದ್ಧಿ ದರ ಶೇ.7.6ಕ್ಕೆ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ
ಉಗ್ರರ ದಾಳಿ: ರತನ್ ಟಾಟಾ ಖಂಡನೆ
ಬೆಂಗಳೂರು: ಡಿ.13ರಂದು ನ್ಯಾನೋ ಮೇಳ