ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ
ವಿದೇಶಗಳಲ್ಲಿರುವ ಶ್ರೀಮಂತ ಅನಿವಾಸಿ ಭಾರತೀಯರು ಭಯೋತ್ಪಾದಕ ದಾಳಿಯಿಂದಾಗಿ ಆಘಾತ ವ್ಯಕ್ತಪಡಿಸಿದ್ದರೂ ತವರೂರಾದ ಭಾರತ ಹೂಡಿಕೆಗೆ ಪ್ರಶಸ್ತ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನಿವಾಸಿ ಭಾರತೀಯರಿಗೆ ಹೂಡಿಕೆಯ ಆಂತಕಕ್ಕಿಂತ ಭಯೋತ್ಪಾದಕರ ಆತಂಕದ ಬೆದರಿಕೆ ಹೆಚ್ಚಾಗಿದೆ. ಆದರೆ ಭಯೋತ್ಪಾದಕ ದಾಳಿಯಗಳಿಂದಾಗಿ ದೇಶದ ಆರ್ಥಿಕತೆಯಲ್ಲಿ ಕುಂಠಿತವಾಗುವುದಿಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ದೇಶದಲ್ಲಿ 300 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವ ಸಂಸ್ಥೆಯ ನಿರ್ದೇಶಕ ಪೂನ್ ತಿಳಿಸಿದ್ದಾರೆ.

ಅಲ್ಪ ಅವಧಿಗೆ ಮಾತ್ರ ಶೇರುಪೇಟೆ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು. ಆದರೆ 2006ರಲ್ಲಿ ಉಗ್ರರು ನಡೆಸಿದ ಬಾಂಬ್‌ಸ್ಪೋಟದಲ್ಲಿ 180 ಮಂದಿ ಸಾವನ್ನಪ್ಪಿದ್ದರೂ ಕೆಲವೇ ದಿನಗಳಲ್ಲಿ ಆರ್ಥಿಕ ಸ್ಥಿತಿ ಮರುಕಳಿಸಿದಂತೆ ಪ್ರಸಕ್ತ ಸಮಯದಲ್ಲಿ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ವಿದೇಶಿಯರು ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದು, ದೇಶದ ಹೂಡಿಕೆದಾರರಿಗೆ ಆಘಾತವಾಗಿದೆ ಎಂದು ನಿರ್ದೇಶಕ ಪೂನ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬೆರಾಯ್‌ನಲ್ಲಿ 'ಯೆಸ್' ಬ್ಯಾಂಕ್ ಅಧ್ಯಕ್ಷರಹತ್ಯೆ
ಭಯೋತ್ಪಾದಕತೆಯಿಂದ ಆರ್ಥಿಕತೆಗೆ ಧಕ್ಕೆಯಿಲ್ಲ:ಎಸ್‌ ಆಂಡ್ ಪಿ
ಅಭಿವೃದ್ಧಿ ದರ ಶೇ.7.6ಕ್ಕೆ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಎಚ್‌ಪಿ, ಡೆಲ್ ಸಿಬಂದಿಗಳಿಗೆ ಪ್ರತಿಬಂಧನ
ಉಗ್ರ ಛಾಯೆ: ರೂಪಾಯಿ ಮೌಲ್ಯವೂ ಕುಸಿತ