ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 132 ಮಂದಿ ಹತರಾಗಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಯೋತ್ಪಾದನೆಯಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ ಎಂದು ಹೋಟೆಲ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.

ದೇಶದ ಆರ್ಥಿಕ ರಾಜಧಾನಿಯಾದ ಮುಂಬೈಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಲು ಭಯೋತ್ಪಾದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ನವೆಂಬರ್ 26 ರಂದು ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ,ಇಂದೊಂದು ಅವಿವೇಕಿ ಹಾಗೂ ಹೇಯ ಕೃತ್ಯವಾಗಿದೆ ಎಂದು ಹೇಳಿದೆ.

ಲಿಯೊಪೊಲ್ಡ್ ಕೆಫೆ, ನಾರಿಮನ್ ಹೌಸ್,ಛತ್ರಪತಿ ಶಿವಾಜಿ ಟರ್ಮಿನಸ್, ತಾಜ್ ಹೋಟೆಲ್, ಟ್ರಿಡೆಂಟ್ ಒಬೆರಾಯ್ ಹೋಟೆಲ್ ಮತ್ತು ಸೆಂಚುರ್ ಹೋಟೆಲ್‌ಗಳ ಮೇಲೆ ಭಯೋತ್ಪಾದಕರು ದಾಳಿಯನ್ನು ನಡೆಸಿ ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದೆ.

ಗುಜರಾತ್ ,ದೆಹಲಿ ಮತ್ತು ಜೈಪುರ್‌ನಂತಹ ವಾಣಿಜ್ಯ ಕೇಂದ್ರಗಳ ಮೇಲೆ ನಡೆದ ಭಯೋತ್ಪಾದ ದಾಳಿ ಕೂಡಾ ದೇಶದ ಆರ್ಥಿಕತೆಯನ್ನು ಕುಂಠಿತಗೊಳಿಸುವ ಹುನ್ನಾರವಾಗಿದೆ ಎಂದು ಹೋಟೆಲ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಇಂಡಿಯಾ ಅಭಿಪ್ರಾಯಪಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ದಾಳಿ ಬಹು ದೊಡ್ಡ ದುರಂತ:ನೀಲೆಕಣಿ
ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ
ಒಬೆರಾಯ್‌ನಲ್ಲಿ 'ಯೆಸ್' ಬ್ಯಾಂಕ್ ಅಧ್ಯಕ್ಷರಹತ್ಯೆ
ಭಯೋತ್ಪಾದಕತೆಯಿಂದ ಆರ್ಥಿಕತೆಗೆ ಧಕ್ಕೆಯಿಲ್ಲ:ಎಸ್‌ ಆಂಡ್ ಪಿ
ಅಭಿವೃದ್ಧಿ ದರ ಶೇ.7.6ಕ್ಕೆ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ