ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ಐಟಿ ಕಂಪೆನಿಗಳ ಮೇಲೆ ಉಗ್ರರ ದಾಳಿ ನಡೆಸಲಿದ್ದಾರೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಐಟಿ ಕಂಪೆನಿಗಳು ವ್ಯಾಪಕ ಭದ್ರತೆಯನ್ನು ಹೆಚ್ಚಿಸಿದ್ದು, ಮುಂಬೈನಲ್ಲಿರುವ ಕೆಲ ಐಟಿ ಕಂಪೆನಿಗಳು ರಜೆಯನ್ನು ಘೋಷಿಸಿವೆ ಎಂದು ಮೂಲಗಳು ತಿಳಿಸಿವೆ.

ಭಯೋತ್ಪಾದಕ ದಾಳಿಗೆ ಗುರಿಯಾದ ಛತ್ರಪತಿ ಶಿವಾಜಿ ಟರ್ಮಿನಲ್‌ಗೆ ಹತ್ತಿರದಲ್ಲಿರುವ ದೇಶದ ಪ್ರಮುಖ ಸಾಪ್ಠೇವೇರ್ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ನ ಕೇಂದ್ರ ಕಚೇರಿ ರಜೆಯನ್ನು ಘೋಷಿಸಿದೆ.

ಭಯೋತ್ಪಾದಕ ನಿಗ್ರಹ ದಳ, ಮುಕ್ತ ಸಂಚಾರಕ್ಕೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈನಲ್ಲಿರುವ ಕೇಂದ್ರ ಕಚೇರಿಯ ಕಾರ್ಯಕಲಾಪಗಳನ್ನು ಉತ್ತರ ಮುಂಬೈನಲ್ಲಿರುವ ಕಚೇರಿಯಿಂದ ನಿರ್ವಹಿಸಲಾಗುವುದು ಎಂದು ಕಂಪೆನಿಯ ವಕ್ತಾರ ಪ್ರದೀಪ್ತಾ ಬಾಗ್ಚಿ ಹೇಳಿದ್ದಾರೆ.

ಉತ್ತರ ಮುಂಬೈನಲ್ಲಿರುವ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಕಾರ್ಯನಿರ್ವಹಿಸುತ್ತಿದ್ದು, ದೇಶದ ಎರಡನೇ ಪ್ರಮುಖ ಸಾಫ್ಟ್‌ವೇರ್ ರಫ್ತು ಕಂಪೆನಿಯಾದ ಇನ್ಫೋಸಿಸ್ ಶಾಖಾ ಕಚೇರಿಗಳಿಗೆ ವ್ಯಾಪಕ ಭದ್ರತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ನಗರವನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದ್ದು, ಉಗ್ರರ ಪ್ರಮುಖ ಗುರಿಯಾಗಿದೆ.ಕಳೆದ ಡಿಸೆಂಬರ್ 2005ರಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ಮೇಲೆ ಉಗ್ರರ ದಾಳಿ, ಜುಲೈ ತಿಂಗಳಲ್ಲಿ ನಡೆದ ಸರಣಿ ಬಾಂಬ್‌ಸ್ಫೋಟದಿಂದ ಉದ್ಯಾನ ನಗರಿ ತಲ್ಲಣಿಸಿತ್ತು.

ನೊಯಿಡಾ ಮೂಲದ ಎಚ್‌ಸಿಎಲ್‌ ಟೆಕ್ನಾಲಾಜೀಸ್ ಮುಂಬೈನಲ್ಲಿರುವ ಕಚೇರಿಗೆ ರಜೆಯನ್ನು ಘೋಷಿಸಲಾಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್‌ ಹೋಟೆಲ್‌ಗೆ ರತನ್ ಟಾಟಾ ಭೇಟಿ
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ಉಗ್ರರ ದಾಳಿ ಬಹು ದೊಡ್ಡ ದುರಂತ:ನೀಲೆಕಣಿ
ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ
ಒಬೆರಾಯ್‌ನಲ್ಲಿ 'ಯೆಸ್' ಬ್ಯಾಂಕ್ ಅಧ್ಯಕ್ಷರಹತ್ಯೆ
ಭಯೋತ್ಪಾದಕತೆಯಿಂದ ಆರ್ಥಿಕತೆಗೆ ಧಕ್ಕೆಯಿಲ್ಲ:ಎಸ್‌ ಆಂಡ್ ಪಿ