ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?
ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ದೂರವಾಣಿ ಸಂಪರ್ಕ ಸೌಲಭ್ಯ ಹಾಗೂ 3 ಜಿ ಸೇವೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ 31 ಬಿಲಿಯನ್ ಡಾಲರ್‌ಗಳ ಆದಾಯವಿರುವ ಟೆಲಿಕಾಂ ಕ್ಷೇತ್ರ, ಮುಂಬರುವ 2012ರ ವೇಳೆಗೆ 54 ಬಿಲಿಯನ್‌ಗಳಿಗೆ ಏರಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಟೆಲಿಕಾಂ ಕ್ಷೇತ್ರ ನಿರಂತರ ಆದಾಯ ಏರಿಕೆಯತ್ತ ಸಾಗುತ್ತಿದ್ದು ಮುಂಬರುವ ದಿನಗಳಲ್ಲಿ ಭಾರಿ ಪ್ರಮಾಣದ ಹೆಚ್ಚಳವನ್ನು ಕಾಣಲಿದೆ ಎಂದು ಇಂಡಿಯಾ 2012 ಎನ್ನುವ ವರದಿಯಲ್ಲಿ ಪ್ರಕಟಿಸಲಾಗಿದೆ.

ಎರ್ನೆಸ್ಟ್ ಆಂಡ್ ಎಂಗ್ ಇಂಡಿಯಾದ ಟೆಲಿಕಾಂ ಉದ್ಯಮಿ ಪ್ರಶಾಂತ್ ಸಿಂಘಾಲ್ ಮಾತನಾಡಿ, ಟೆಲಿಕಾಂ ಕ್ಷೇತ್ರದ ವೇಗ, ಗ್ರಾಮೀಣ ಕ್ಷೇತ್ರದಲ್ಲಿ ದೂರವಾಣಿ ಸಂಪರ್ಕ, 3ಜಿ, ವಿಮ್ಯಾಕ್ಸ್, ಮತ್ತು ಡಾಟಾ ಸೇವೆಗಳಿಂದಾಗಿ 2012ರ ವೇಳೆಗೆ ಭಾರತದ ಟೆಲಿಕಾಂ ಕ್ಷೇತ್ರ 54 ಬಿಲಿಯನ್ ಡಾಲರ್‌ಗಳ ನಿವ್ವಳ ಆದಾಯ ಹೊಂದಲಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ 3ಜಿ ಸೇವೆ ದೇಶದಾದ್ಯಂತ ಹರಡಲು ಆರಂಭವಾಗಿದ್ದು, ಮೊಬೈಲ್ ಎಂಟರ್‌ಟೈನ್‌ಮೆಂಟ್ ಮತ್ತು ಮೊಬೈಲ್ ಬ್ಯಾಂಕಿಂಗ್‌ಗಳಿಂದಾಗಿ ಟೆಲಿಕಾಂ ಕ್ಷೇತ್ರ ವೇಗದಿಂದ ದಾಪುಗಾಲ ಹಾಕಲಿದೆ ಎಂದು ಸಿಂಘಾಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ತಾಜ್‌ ಹೋಟೆಲ್‌ಗೆ ರತನ್ ಟಾಟಾ ಭೇಟಿ
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ಉಗ್ರರ ದಾಳಿ ಬಹು ದೊಡ್ಡ ದುರಂತ:ನೀಲೆಕಣಿ
ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ
ಒಬೆರಾಯ್‌ನಲ್ಲಿ 'ಯೆಸ್' ಬ್ಯಾಂಕ್ ಅಧ್ಯಕ್ಷರಹತ್ಯೆ