ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ
ನಗರದ ಆಯಕಟ್ಟಿನ ಕೈಗಾರಿಕಾ ಪ್ರದೇಶಗಳಿಗೆ ಪರಕೀಯರ ಪ್ರವೇಶ ನಿರ್ಬಂಧಿಸುವ ವಿಶೇಷ ಹಕ್ಕು ಹಾಗೂ ಆಧುನಿಕ ಶಸ್ತ್ರಾಸ್ತ್ರ ಹೊಂದುವ ಅವಕಾಶವನ್ನು ನಾಗರಿಕರಿಗೆ ನೀಡಬೇಕು ಎಂಬ ಬೇಡಿಕೆಯನ್ನು ನಗರದ ಕೈಗಾರಿಕೋದ್ಯಮಿಗಳು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಮುಂಬೈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯೋಜಿಸಿದ ಉದ್ಯಮಿಗಳ ಸಭೆಯಲ್ಲಿ ಈ ಬೇಡಿಕೆಗಳು ಕೇಳಿಬಂದವು.

ಉದ್ಯಮಿಗಳಾದ ಮೋಹನ್‌ದಾಸ್ ಪೈ, ಕಿರಣ್ ಮಜುಮ್ದಾರ್, ಮಿಕ್ರಮ್ ಕಿರ್ಲೋಸ್ಕರ್, ರಾಜೀವ್ ಚಂದ್ರಶೇಖರ್, ತಾಜ್ ಹೋಟೆಲ್ ಪ್ರತಿನಿಧಿಗಳು ಹಲವು ಸಲಹೆಗಳನ್ನು ನೀಡಿದರು.

ಇನ್ಪೋಸಿಸ್ ಮಾನವ ಸಂಪನ್ಮೂಲ ಅಧಿಕಾರಿ ಟಿ.ವಿ.ಮೋಹನ್‌ದಾಸ್ ಪೈ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದರು. "ನಿಮಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಅಮೆರಿಕದಂತೆ ಎಕೆ 47 ನಂಥ ಆಧುನಿಕ ಶಸ್ತ್ರಾಸ್ತ್ರ ಹೊಂದಲಾದರೂ ಅನುಮತಿ ನೀಡಿ. ಇದಕ್ಕೆ ಅಗತ್ಯ ಕಾನೂನು ತಿದ್ದುಪಡಿ ತನ್ನಿ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ. ರಾಜಕಾರಣಿಗಳಿಗೆ ಪ್ರತ್ಯೇಕ ರಕ್ಷಣೆಗಳಿವೆ. ಮುಖಂಡರು ಬಂದಾಗ ರಸ್ತೆ ಬಂದಾಗ ರಸ್ತೆ ಖಾಲಿಯಾಗುತ್ತದೆ. ಆದರೆ ನಮ್ಮನ್ನು ಕೇಳುವವರಾರು?" ಎಂದು ಖಾರವಾಗಿ ಪ್ರಶ್ನಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?
ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ತಾಜ್‌ ಹೋಟೆಲ್‌ಗೆ ರತನ್ ಟಾಟಾ ಭೇಟಿ
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ಉಗ್ರರ ದಾಳಿ ಬಹು ದೊಡ್ಡ ದುರಂತ:ನೀಲೆಕಣಿ
ಭಯೋತ್ಪಾದಕ ದಾಳಿ: ಎನ್‌ಆರ್‌ಐಗಳಿಗೆ ಆಘಾತ