ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಭಾವ್ಯ ದಾಳಿಯ ಮಾಹಿತಿ ಇತ್ತು: ರತನ್ ಟಾಟಾ
ಅತ್ಯಂತ ಸುಂದರ ಹಾಗೂ ವೈಭವದ ಹೋಟೇಲ್ ತಾಜ್ ಇಂಟರ್‌ಕಾಂಟಿನೆಂಟಲ್ ಮೇಲೆ ಸಂಭಾವ್ಯ ಉಗ್ರರ ದಾಳಿ ನಡೆಯುವ ಕುರಿತು ಎಚ್ಚರಿಸಲಾಗಿತ್ತು ಎಂದು ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.

ಖಾಸಗೀ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಅವರು ಈ ಅಂಶವನ್ನು ವ್ಯಕ್ತಪಡಿಸಿದ್ದು, ಎಚ್ಚರಿಕೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿತ್ತು ಎಂದೂ ಹೇಳಿದ್ದಾರೆ. ಆದರೆ ಹೆಚ್ಚಿಸಲ್ಪಟಿರುವ ಭದ್ರತೆಯೂ ಬಂಧೂಕುಧಾರಿಗಳನ್ನು ತಡೆಯಲು ವಿಫಲವಾಗಿತ್ತು ಎಂದೂ ಅವರು ಹೇಳಿದ್ದಾರೆ.

ಮುಂಬೈನ ಗೇಟ್‌‌ವೇ ಆಫ್ ಇಂಡಿಯ ಬಳಿ ಇರುವ ತಾಜ್ ಹೋಟೇಲ್ ಉಗ್ರರ 10 ಗುರಿಗಳಲ್ಲಿ ಒಂದಾಗಿದ್ದು, ದಾಳಿಯಿಂದಾಗಿ ಸಾಕಷ್ಟು ಹಾನಿಗೊಳಗಾಗಿದೆ. 105 ವರ್ಷ ಹಳೆಯದಾದ ವೈಭವೋಪೇತ ಹೋಟೇಲ್‌ನಲ್ಲಿ 59 ಗಂಟೆಗಳ ಕಾಲ ಉಗ್ರರು ಮತ್ತು ಎನ್‌ಎಸ್‌ಜಿ ನಡುವೆ ಗುಂಡಿನ ಕಾಳಗ ನಡೆದಿತ್ತು.

ನಾವು ಕ್ರಮಗಳನ್ನು ಕೈಗೊಂಡಿದ್ದರೂ, ಉಗ್ರರು ಹೋಟೇಲಿನೊಳಗೆ ನುಸುಳುವುದನ್ನು ತಡೆಯಲು ವಿಫಲವಾಗಿತ್ತು. ಕ್ರಮಗಳನ್ನು ಕೈಗೊಂಡಿದ್ದರೂ ದಾಳಿ ನಡೆದಿರುವುದು ಖೇದಕರ ಎಂದು ಟಾಟಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ಯಮಿಗಳಿಂದ ಶಸ್ತ್ರಾಸ್ತ್ರ ಅನುಮತಿ ಬೇಡಿಕೆ
ಟೆಲಿಕಾಂ ಆದಾಯದಲ್ಲಿ ಭಾರಿ ಹೆಚ್ಚಳ ಸಾಧ್ಯತೆ?
ಐಟಿ ಕಂಪೆನಿಗಳಿಗೆ ಭದ್ರತೆ,ಕಟ್ಟೆಚ್ಚರ
ತಾಜ್‌ ಹೋಟೆಲ್‌ಗೆ ರತನ್ ಟಾಟಾ ಭೇಟಿ
ಆರ್ಥಿಕತೆಗೆ ಬೆದರಿಕೆಯೊಡ್ಡಲು ಭಯೋತ್ಪಾದಕ ದಾಳಿ
ಉಗ್ರರ ದಾಳಿ ಬಹು ದೊಡ್ಡ ದುರಂತ:ನೀಲೆಕಣಿ